ನ್ಯೂಸ್ ನಾಟೌಟ್: ಸೆಕ್ಸ್ ಅನ್ನುವುದು ಭಾರತದಲ್ಲಿ ತೀರ ಮಡಿವಂತಿಕೆಯ ವಿಷಯ. ಸೆಕ್ಸ್ ಮಾಡುವುದಕ್ಕೆ ಭಾರತದಲ್ಲಿ ಕಾನೂನಿನ ಚೌಕಟ್ಟು ನಿರ್ಮಿಸಲಾಗಿದೆ. ಕಾನೂನು ಮೀರಿದರೆ ಅಕ್ರಮ ಸಂಬಂಧವಾಗುತ್ತದೆ. ಆದರೆ ವಿದೇಶದಲ್ಲಿ ಇದೆಲ್ಲ ಮಾಮೂಲಿ ಅನ್ನುವ ಮಾತಿದೆ. ಏನೇ ಇರಲಿ ಈ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ವಿದೇಶದಲ್ಲಿ ಸೆಕ್ಸ್ ಚಾಂಪಿಯನ್ ಶಿಪ್ ಆಯೋಜಿಸಲು ನಿರ್ಧರಿಸಲಾಗಿದೆ.
ಯುರೋಪ್ ರಾಷ್ಟ್ರ ಸ್ವೀಡನ್, ಸೆಕ್ಸ್ ಅನ್ನು ಕ್ರೀಡೆಯಾಗಿ ಪರಿಗಣನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅದರೊಂದಿಗೆ ಮೊಟ್ಟಮೊದಲ ಆವೃತ್ತಿಯ ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಷಿಪ್‌ಗೆ ದಿನಾಂಕವನ್ನು ಕೂಡ ಪ್ರಕಟ ಮಾಡಿದೆ ಎಂದು ವರದಿ ತಿಳಿಸಿದೆ.
ಇದೇ ಜೂನ್ 8 ರಂದು ಮೊದಲ ಆವೃತ್ತಿಯ ಚಾಂಪಿಯನ್‌ಷಿಪ್ ನಡೆಯಲಿದ್ದು, ಹಲವಾರು ವಾರಗಳ ಕಾಲ ನಡೆಯಲಿದೆ. ಸ್ವೀಡಿಷ್ ಸೆಕ್ಸ್ ಫೆಡರೇಷನ್ ಈ ಟೂರ್ನಮೆಂಟ್ ಅನ್ನು ಆಯೋಜನೆ ಮಾಡಲಿದೆ. ಎಷ್ಟು ವಾರಗಳ ಕಾಲ ಈ ಚಾಂಪಿಯನ್‌ಷಿಪ್ ನಡೆಯಲಿದೆ ಎನ್ನುವ ಮಾಹಿತಿ ಸದ್ಯ ಅಪೂರ್ಣವಾಗಿದ್ದು, ಒಂದು ದಿನಕ್ಕೆ 6 ಗಂಟೆಗಳ ಕಾಲ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಬೇಕಿದೆ. ಈ ಸಮಯದಲ್ಲಿ, ಸ್ಪರ್ಧಿಗಳು, ತಮ್ಮ ಲೈಂಗಿಕ ಕ್ರಿಯೆ ಅಥವಾ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸರಿಸುಮಾರು 45 ನಿಮಿಷಗಳಿಂದ ಒಂದು ಗಂಟೆಯವರೆಗಿನ ಸಮಯ ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ.
ವರದಿಗಳ ಪ್ರಕಾರ, ಈಗಾಗಲೇ 20ಕ್ಕೂ ಅಧಿಕ ದೇಶದ ಸ್ಪರ್ಧಿಗಳು ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್‌ನ ವಿಜೇತರನ್ನು ಮೂರು ತೀರ್ಪುಗಾರರು ಮತ್ತು ಪ್ರೇಕ್ಷಕರ ರೇಟಿಂಗ್‌ಗಳ ಸಂಯೋಜನೆಯ ಮೂಲಕ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
ಅಂತಿಮ ಮೌಲ್ಯಮಾಪನದ ಸಮಯದಲ್ಲಿ, ಪ್ರೇಕ್ಷಕರಿಂದ 70% ಮತಗಳನ್ನು ಪರಿಗಣಿಸಲಾಗುತ್ತದೆ, ಆದರೆ ಉಳಿದ 30% ತೀರ್ಪುಗಾರರ ಮತಗಳಿಂದ ಬರುತ್ತದೆ.
ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಶಿಪ್‌ನ ಸ್ಪರ್ಧಿಗಳು ಸೆಡಕ್ಷನ್, ಓರಲ್ ಸೆಕ್ಸ್, ಸಂಭೋಗ, ಸ್ಪರ್ಧಿಗಳ ವಸ್ತ್ರವಿನ್ಯಾಸ ಇತ್ಯಾದಿ ಸೇರಿದಂತೆ 16 ವಿಭಾಗಗಳಲ್ಲಿ ಸ್ಪರ್ಧಿಸುತ್ತಾರೆ ಎಂದಿದೆ.
ಇಡೀ ಚಾಂಪಿಯನ್‌ಷಿಪ್ ಸ್ವೀಡನ್‌ನ ಗೊಥೆನ್‌ಬರ್ಗ್‌ನಲ್ಲಿ ನಡೆಯಲಿದೆ ಎಂದು ಸ್ವೀಡನ್ ಸೆಕ್ಸ್ ಫೆಡರೇಷನ್ ಮಾಹಿತಿ ನೀಡಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಫೆಡರೇಷನ್‌ನ ಅಧ್ಯಕ್ಷ ಡ್ರಾಗನ್ ಬ್ರಾಟಿಚ್, ‘ಸೆಕ್ಸ್‌ಅನ್ನು ಕ್ರೀಡೆಯಾಗಿ ಪರಿಗಣನೆ ಮಾಡಿರುವುದು ಬಹಳ ಖುಷಿಯ ವಿಚಾರ. ಇದು ಮಾನಸಿಕ ಹಾಗೂ ದೈಹಿಕ ಸುಸ್ಥಿತಿಗೆ ಕಾರಣವಾಗಿತ್ತದೆ. ಸ್ಪರ್ಧಿಗಳು ತಮ್ಮ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ತರಬೇತಿಯೂ ಅಗತ್ಯವಿದೆ’ ಎಂದು ಮಾಹಿತಿ ನೀಡಿದ್ದಾರೆ.