ನ್ಯೂಸ್ ನಾಟೌಟ್: ಮಕ್ಕಳಾಗಿಲ್ಲ ಎಂದು ಹರೆಕೆ ಹೊತ್ತ ಸುಳ್ಯದ ಮೂಲದ ದಂಪತಿಯ ಕಷ್ಟವನ್ನು ಶ್ರೀಆರಿಕೋಡಿ ಚಾಮುಂಡೇಶ್ವರಿ ಕೇವಲ ಒಂದು ವರ್ಷದಲ್ಲೇ ಬಗೆಹರಿಸಿಕೊಟ್ಟಿದ್ದಾಳೆ. ಇದರೊಂದಿಗೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬರೆದಡಿ ಮನೆಯ ಗಿರಿ ಪ್ರಸಾದ್ ಮತ್ತು ರಮ್ಯ ದಂಪತಿಯ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದ್ದಾಳೆ.
ಗಿರಿ ಪ್ರಸಾದ್ ಮತ್ತು ರಮ್ಯ ದಂಪತಿ ಹಲವು ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ಆದರೆ ಅವರ ಬಾಳಿನಲ್ಲಿ ಮಗುವಿನ ಭಾಗ್ಯ ಒದಗಿ ಬಂದಿರಲಿಲ್ಲ. ಹಲವಾರು ಮದ್ದು ಮಾಡಿದರು. ಹರಕೆ ಹೊತ್ತರು. ಏನೇ ಮಾಡಿದರೂ ಇವರ ಜೀವನದಲ್ಲಿ ಬೆಳಕು ಕಾಣಿಸಲೇ ಇಲ್ಲ. ಇಂತಹ ಸಂದರ್ಭದಲ್ಲಿ ಅವರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಬಂದು ದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮಗೆ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಅಭಯ ಕೊಟ್ಟಳು. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಸಂತಾನ ಭಾಗ್ಯ ಒದಗಿ ಬಂದಿದೆ. ಈ ಹಿನ್ನೆಲೆಯಲ್ಲಿ ದಂಪತಿ ಕುಟುಂಬ ಸಮೇತರಾಗಿ ಬಂದು ಶ್ರೀದೇವಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದ್ದಾರೆ.