ನ್ಯೂಸ್ ನಾಟೌಟ್ : ಸಮಾಜದಲ್ಲಿರುವ ಅಶಕ್ತರೊಂದಿಗೆ ಸಕ್ರಿಯವಾಗಿ ನಿಲ್ಲಬೇಕು, ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಮಾಜದ ಕಣ್ಣಿರನ್ನು ಒರೆಸುವಂತ ಶಕ್ತಿಯನ್ನು ನೀಡಲಿ. ತನು ಮನ ಧನ ಸಹಾಯದೊಂದಿಗೆ ನಾನು ಕೂಡ ನಿಮ್ಮ ಜೊತೆ ಕೈ ಜೋಡಿಸುತ್ತೇನೆ ಎಂದು ಹಿಂದೂ ನಾಯಕ ಅರುಣ್ ಪುತ್ತಿಲ ತಿಳಿಸಿದರು.
ಪುತ್ತೂರಿನಲ್ಲಿ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ನ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಜೆಸಿಐ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 23ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
69,000 ಸಾವಿರ ಮೊತ್ತದ 69 ಆಹಾರ ಕಿಟ್ ವಿತರಣೆ, 56 ಜನರಿಗೆ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತಿರುವ ಬಡಗನ್ನೂರಿನ ಕು.ಅನನ್ಯ ಇವರಿಗೆ ಒಂದು ತಿಂಗಳಿಗೆ ಬೇಕಾಗಿರುವ 2750/- ರೂಪಾಯಿಯ ಔಷಧಿಯನ್ನು ನೀಡಲಾಯಿತು. ಟ್ರಸ್ಟಿನ ಅಧ್ಯಕ್ಷೆ ಶೋಭಾ ಮಡಿವಾಳ, ಸ್ಥಾಪಕ ಅಧ್ಯಕ್ಷರಾದ ಚೇತನ್ ಕುಮಾರ್, ಕಾರ್ಯದರ್ಶಿ ಮೋಹನ್ ಸಿಂಹವನ, ಸಲಹೆಗಾರ ಪ್ಯಾಟ್ರಿಕ್ ಸಪ್ರಿಯನ್ ಮಸ್ಕರೇನಿಸ್, ಸದಸ್ಯರಾದ ಶ್ರೀಮತಿ ಕಾವ್ಯ, ಶ್ರೀಮತಿ ಸರಸ್ವತಿ, ಕುಮಾರಿ ಚಿತ್ರ ಉಪಸ್ಥಿತರಿದ್ದರು.
- +91 73497 60202
- [email protected]
- November 23, 2024 2:39 AM