ನ್ಯೂಸ್ ನಾಟೌಟ್ : ಹಿಂದೂಗಳ ಭದ್ರಕೋಟೆ ಬಿಜೆಪಿಯ ಓಟ್ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಲ ಲೋಕಸಭಾ ಚುನಾವಣೆಗೆ ಯಾರು ನಿಲ್ತಾರೆ? ಹೈಕಮಾಂಡ್ಗೆ ಯಾರಿಗೆ ಮಣೆ ಹಾಕಬಹುದು ಅನ್ನುವ ಕುತೂಹಲ ಗರಿಗೆದರಿದೆ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ಗೆ ಟಿಕೇಟ್ ನೀಡಬಾರದು ಅನ್ನುವ ಅಭಿಯಾನ ಶುರುವಾಗಿರುವುದರ ಜತೆಗೆ ಜನಪರ ನಾಯಕ ಅರುಣ್ ಪುತ್ತಿಲಗೆ ಮಣೆ ಹಾಕಬೇಕು ಅನ್ನುವ ಧ್ವನಿಯೂ ಗಟ್ಟಿಯಾಗಿದೆ. ಈ ನಡುವೆಯೇ ಎಂಪಿ ಚುನಾವಣೆಗೆ ಮತ್ತೊಬ್ಬ ನಾಯಕನ ಹೆಸರು ಕೇಳಿ ಬಂದಿದ್ದು ಕರಾವಳಿಯ ಜನರ ಚಿತ್ತ ಅವರತ್ತವೂ ನೆಟ್ಟಿದೆ.
ನಳಿನ್ ಕುಮಾರ್ ಕಟೀಲ್ ಹಾಲಿ ಬಿಜೆಪಿಯ ರಾಜ್ಯಾಧ್ಯಕ್ಷ. ಮೂರು ಸಲ ದಕ್ಷಿಣ ಕನ್ನಡ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಹಿಂದುತ್ವದ ವಿಚಾರಧಾರೆಯಿಂದಲೇ ನಳಿನ್ ಗೆದ್ದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರ ವಿರುದ್ಧ ಒಳ್ಳೆ ಅಭಿಪ್ರಾಯಗಳಿಲ್ಲ. ಹಿಂದೂ ಕಾರ್ಯಕರ್ತರನ್ನು ನಿರ್ಲಕ್ಷಿಸಿದ ಆರೋಪವಿದೆ. ಈ ಬೆನ್ನಲ್ಲೇ ಇವರಿಗೆ ಟಿಕೇಟ್ ನೀಡಬಾರದು ಅನ್ನುವ ಕಾರ್ಯಕರ್ತರ ಒತ್ತಾಯವಿದೆ. ಬದಲಿಗೆ ಅರುಣ್ ಪುತ್ತಿಲ ಅವರಿಗೆ ಟಿಕೇಟ್ ಕೊಡಬೇಕೆಂಬುದು ಹಲವು ಹಿಂದೂ ಕಾರ್ಯಕರ್ತರ ಆಸೆಯಾಗಿದೆ. ಈ ನಡುವೆಯೇ ಮಂಗಳೂರು ಕಂಬಳದ ಮೂಲಕ ಜಿಲ್ಲೆಯಲ್ಲಿ ಬಹಳಷ್ಟು ಹೆಸರು ಮಾಡಿದ ಹೋರಾಟಗಾರ ಬ್ರಿಜೇಶ್ ಚೌಟಾಗೆ ಲೋಕಸಭಾ ಟಿಕೇಟ್ ನೀಡಬೇಕು ಅನ್ನುವ ಮಾತುಗಳು ಕೇಳಿ ಬರುತ್ತಿದೆ. ಚೌಟಾ ಸಂಘಟನಾ ಚತುರ. ಪ್ರಖರ ರಾಷ್ಟ್ರೀಯವಾದಿ. ಬಿಜೆಪಿಯ ರಾಜ್ಯ ಸಭಾ ಸದಸ್ಯ ಹಾಗೂ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರ ಆತ್ಮೀಯ ಒಡನಾಟ ಹೊಂದಿದ ವ್ಯಕ್ತಿಯಾಗಿದ್ದಾರೆ. ಬ್ರಿಜೇಶ್ ಚೌಟಾ ಪರವೂ ಬಿಜೆಪಿ ಹೈಕಮಾಂಡ್ ಒಲವು ಇದೆ ಎನ್ನಲಾಗುತ್ತಿದೆ. ಅಂತಿಮವಾಗಿ ಯಾರಿಗೆ ಟಿಕೇಟ್ ಸಿಗಬಹುದು ಅನ್ನುವುದು ಸದ್ಯದ ಕುತೂಹಲವಾಗಿದೆ.