ನ್ಯೂಸ್ ನಾಟೌಟ್ : ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಉಚಿಯವಾಗಿ ಅನ್ವಯ ಎಂದು ನಾವು ಎಲ್ಲೂ ಹೇಳಿಲ್ಲ. ಸರ್ಕಾರದ ಯಾವುದೇ ಯೋಜನೆ ಪುಕ್ಸಟ್ಟೆ ಇರುವುದಿಲ್ಲ. ಮಾನದಂಡಗಳು ಅಗತ್ಯ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಕುರಿತು ಮಾತನಾಡಿ, ಗ್ಯಾರಂಟಿ ಯೋಜನೆಗಳು ಯಾರಿಗೆ ಸಿಗಬೇಕು ಹಾಗೂ ಯಾರಿಗೆ ಸಿಗಬಾರದು ಎಂಬ ನೀಲಿ ನಕ್ಷೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆಲವೊಂದು ನಿರ್ಬಂಧಗಳು ಅನಿವಾರ್ಯ. ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರದ್ದೇ ಇರಲಿ, ಸರ್ಕಾರದ ಯಾವುದೇ ಯೋಜನೆಗಳು ಪುಕ್ಸಟ್ಟೆಯಾಗಿ ಸಿಗುವುದಿಲ್ಲ. ಬದಲಾಗಿ ಕೆಲವೊಂದು ಮಾನದಂಡಗಳು ಅಗತ್ಯವಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಕುರಿತು ಶುಕ್ರವಾರ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗುತ್ತದೆ. ಆಳವಾಗಿ ಚರ್ಚೆ ಆದ ಬಳಿಕ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಆರ್ಥಿಕ ಇಲಾಖೆಯವರು ಯಾವ ರೀತಿಯಲ್ಲಿ ಘೋಷಣೆಗಳನ್ನು ಜಾರಿಗೊಳಿಸಬಹುದು ಎಂದು ಅವರು ಬುಧವಾರ ಮಾಹಿತಿ ನೀಡಿದ್ದಾರೆ.