ನ್ಯೂಸ್ ನಾಟೌಟ್: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಜಯಗಳಿಸಿತ್ತು. ಐಪಿಎಲ್ ಟ್ರೋಪಿಯನ್ನು ಗೆದ್ದ ಸಿಎಸ್ಕೆ ಚೆನ್ನೈನ ತಿರುಮಲ ತಿರುಪತಿ ದೇವಸ್ಥಾನಕ್ಕೆ ಟ್ರೋಪಿಯನ್ನು ಕೊಂಡೊಯ್ದಿದ್ದಾರೆ ಎಂದು ವರದಿ ತಿಳಿಸಿದೆ.
ಮಳೆ ಅಡ್ಡಿಪಡಿಸಿದರೂ ಆಟದ ಕೊನೆಯ ಎಸೆತಗಳಲ್ಲಿ ಸಿಎಸ್ಕೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿತು. ಮೇ 28 ರಂದು ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಮಳೆಯು ಅಡ್ಡಿಪಡಿಸಿತು. ಈ ಪಂದ್ಯವನ್ನು ಸೋಮವಾರ ಮುಂದೂಡಲಾಯಿತು. ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಸಾಯಿ ಸುದರ್ಶನ್ ಅವರ 96 ರನ್ಗಳಿಂದ ಗುಜರಾತ್ ಟೈಟಾನ್ಸ್ ತನ್ನ 20 ಓವರ್ಗಳಲ್ಲಿ 214/4 ಗಳಿಸಿತು. ಇದಾದ ಬಲಿಕ ಪಂದ್ಯವನ್ನು ಮತ್ತೆ ಮಳೆ ಅಡ್ಡಿಪಡಿಸಿತು. ಪಂದ್ಯವನ್ನು 15 ಓವರ್ಗಳಿಗೆ ಕಡಿತಗೊಳಿಸಲಾಯಿತು. ಆಗ ಪರಿಷ್ಕೃತ ಮೊತ್ತವನ್ನು 171ಕ್ಕೆ ಇಳಿಸಲಾಯಿತು. ಡೆವೊನ್ ಕಾನ್ವೇ ಮತ್ತು ರುತುರಾಜ್ ಗಾಯಕ್ವಾಡ್ ನಡುವಿನ ಪ್ರಬಲ ಆರಂಭಿಕ ಆಟವು ಸಿಎಸ್ಕೆಗೆ ಬಲವನ್ನು ನೀಡಿತು. ಅಜಿಂಕ್ಯ ರಹಾನೆ, ಅಂಬಟಿ ರಾಯುಡು ಮತ್ತು ಶಿವಂ ದುಬೆ ಮಧ್ಯದಲ್ಲಿ ಉತ್ತಮವಾಗಿ ಆಟವಾಡಿದರು. ಕೊನೆಯ ಓವರ್ನಲ್ಲಿನ ಎರಡು ಬಾಲ್ಗಳಿಗೆ 10 ರನ್ ಬೇಕಾಗಿತ್ತು.
ಅಲ್ರೌಂಡರ್ ರವೀಂದ್ರ ಜಡೇಜಾ ಅವರು ಒಂದು ಸಿಕ್ಸರ್ ಹಾಗೂ ಒಂದು ಬೌಂಡರ್ ಗಳಿಸುವ ಮೂಲಕ ಸಿಎಸ್ಕೆ ಗೆಲುವಿಗೆ ಕಾರಣರಾದರು. ಎಂಎಸ್ ಧೋನಿ ಅವರಿಗೆ ಇದು ಅಂತಿಮ ಐಪಿಎಲ್ ಪಂದ್ಯವೆಂದು ಹೇಳಲಾಗುತ್ತಿದೆ.