ನ್ಯೂಸ್ ನಾಟೌಟ್ : ಕುಸ್ತಿಪಟುಗಳ ಮೇಲೆ ಲೈಗಿಂಕ ಕಿರುಕುಳ ಆರೋಪ ಸಂಬಂಧ ಅವರು ತಮ್ಮ ಅಮೂಲ್ಯ ಪದಕಗಳನ್ನು ಗಂಗಾ ನದಿಗೆ ಎಸೆಯುವ ನಿರ್ಧಾರದ ಕುರಿತು ಮಾತನಾಡಿರುವ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.
ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊಂದಿರರುವ ಅವರು, ಕುಸ್ತಿಪಟುಗಳು ತಮ್ಮ ಪ್ರಶಸ್ತಿಗಳನ್ನು ನೀರಿಗೆ ಒಪ್ಪಿಸುವ ನಿರ್ಧಾರವು ಸಂಪೂರ್ಣವಾಗಿ ಅವರು ತೆಗೆದುಕೊಂಡ ನಿಲುವಾಗಿದೆ. ನನ್ನ ಮೇಲಿನ ಆರೋಪ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಸತ್ಯವಿದ್ದರೆ ಬಂಧನವಾಗುವುದು ಎಂದು ಅವರು ಹೇಳಿದರು.
ಮಂಗಳವಾರ ಕುಸ್ತಿಪಟುಗಳು ತಾವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಹರಿದ್ವಾರ ನಗರಕ್ಕೆ ಆಗಮಿಸಿದ್ದರು. ಆಗ ಅವರನ್ನು ನದಿ ದಡದಲ್ಲಿ ಮನವೊಲಿಸಿದ ರೈತ ಮುಖಂಡ ನರೇಶ್ ಟಿಕಾಯತ್ ವಾಪಸು ಕರೆತಂದರು. ನಂತರ ಕುಸ್ತಿಪಟುಗಳು ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಐದು ದಿನಗಳ ಗಡುವು ನೀಡಿದರು.