ನ್ಯೂಸ್ ನಾಟೌಟ್: ಸುಳ್ಯ ತಾಲೂಕು ಕಚೇರಿಯಲ್ಲಿ ಸರ್ವೆ ಇಲಾಖೆಯ ಉದ್ಯೋಗಿ ಅಶೋಕ ಆಲೆಟ್ಟಿ(35 ವರ್ಷ) ಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.ಮೃತರು ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ದಿ.ನಾರಾಯಣ ಮಣಿಯಾಣಿ ಯವರ ಪುತ್ರ.
ಕೆಲದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಚಿಕಿತ್ಸೆಗೆ ಸ್ಪಂದಿಸದೇ ಇಂದು ನಿಧನರಾದರು.ಅಶೋಕ ಆಲೆಟ್ಟಿಯವರುಆಲೆಟ್ಟಿ ಸದಾಶಿವ ಭಜನಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು,ಆಲೆಟ್ಟಿ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದರು. ಸಹೋದರ ಶಿವಪ್ರಸಾದ್ ಮಣಿಯಾಣಿ ಆಲೆಟ್ಟಿ, ಸಹೋದರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.