ನ್ಯೂಸ್ ನಾಟೌಟ್ : 18 ತಿಂಗಳ ಮಗುವೊಂದು ಹಾವು ಕಡಿದ ಮಗುವನ್ನು ತಾಯಿ 6 ಕಿಲೋಮೀಟರ್ ಗಳಷ್ಟು ದೂರ ಹೊತ್ತು ಓಡಿದರೂ ಫಲಕಾರಿಯಾಗದೆ ಮಗು ಇಂದು(ಮೇ ೨೯) ಮೃತಪಟ್ಟ ಘಟನೆ ತಮಿಳುನಾಡಿನ ವೆಲ್ಲೋರ್ ಜಿಲ್ಲೆಯಲ್ಲಿ ನಡೆದಿದೆ.
ಆ ಪ್ರದೇಶದಲ್ಲಿ ಸಮರ್ಪಕ ರಸ್ತೆ ಇಲ್ಲದೆ ಹೋಗಿದ್ದರಿಂದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ತಾಯಿಗೆ ಸಾಧ್ಯವಾಗಿಲ್ಲ. ಆ್ಯಂಬುಲೆನ್ಸ್ನ ಸಿಬ್ಬಂದಿಗಳು ಅವರನ್ನು ಮಧ್ಯ ದಾರಿಯಲ್ಲೇ ಬಿಟ್ಟು ಹೋಗಿರುವುದರಿಂದ ಗುಡ್ಡಗಾಡು ದಾರಿಯಲ್ಲಿ ತಾಯಿಯು ಮಗುವನ್ನು ಹೊತ್ತುಕೊಂಡು ಆರು ಕಿಮೀ ನಡೆದಿದ್ದಾಳೆ ಎಂದು ವರದಿ ತಿಳಿಸಿದೆ.
ಹಾವು ಕಡಿತದ ನಂತರ 18 ತಿಂಗಳ ಮಗು ಧನುಷ್ಕಾಳನ್ನು ಹೊತ್ತುಕೊಂಡು ಆಕೆಯ ಪೋಷಕರು ವೆಲ್ಲೋರ್ ಜಿಲ್ಲಾಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಮಗು ಮಾರ್ಗಮಧ್ಯದಲ್ಲೇ ಮೃತಪಟ್ಟಿದೆ ಎಂದು ವರದಿಯಾಗಿದೆ.
ಈ ಸಂಬಂಧ ಅನ್ನೈಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.