ನ್ಯೂಸ್ ನಾಟೌಟ್: ಇಂಡೋನೇಷ್ಯಾದ ಬಾಲಿಯಲ್ಲಿ ಜರ್ಮನಿಯ ಮಹಿಳೆಯೊಬ್ಬರು ಏಕಾಏಕಿ ಬಟ್ಟೆ ಬಿಚ್ಚಿ ಹಿಂದೂ ದೇವಾಲಯದೊಳಗೆ ಪ್ರವೇಶಿಸಿದ್ದಾರೆ. ಈ ಘಟನೆಯ ವೇಳೆ ಸಾಕಷ್ಟು ಮಂದಿ ಅಲ್ಲಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಬಾಲಿಯ ಈ ದೇವಾಲಯದಲ್ಲಿ ಬೆತ್ತಲೆಯಾದ ನಂತರ, ಜರ್ಮನ್ ಹುಡುಗಿ ವಿಚಿತ್ರವಾಗಿ ವರ್ತಿಸಿ ಗಲಾಟೆ ಮಾಡಲು ಶುರುಮಾಡಿದ್ದಾಳೆ ಎನ್ನಲಾಗಿದೆ.
ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಟ್ಟೆ ಬಿಚ್ಚಿದ ಬಳಿಕ ಮಹಿಳೆ ಅಲ್ಲಿ ಇಲ್ಲಿ ಸುತ್ತಾಡುತ್ತಾ ದೇವಸ್ಥಾನದಲ್ಲಿದ್ದ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾಳೆ. ದೇವಸ್ಥಾನದ ಆಡಳಿತ ಮಂಡಳಿ ತುರ್ತು ಸೇವೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಹಿಳೆಯನ್ನು ನಿಭಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು ಎನ್ನಲಾಗಿದೆ.
ಪೊಲೀಸರ ವಿಚಾರಣೆಯಲ್ಲಿ ಆಕೆ ಮಾನಸಿಕ ಸ್ಥಿತಿ ಸರಿಯಿಲ್ಲ. ಅದರ ನಂತರ ಇಂಡೋನೇಷ್ಯಾದ ಅಧಿಕಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರೋಟೋಕಾಲ್ ಅನ್ನು ಅನುಸರಿಸಿ, ಅವರನ್ನು ಚಿಕಿತ್ಸೆಗಾಗಿ ಮಾನಸಿಕ ಆಸ್ಪತ್ರೆಗೆ ಕಳುಹಿಸಿದರು. ಆಕೆ ತಂಗಿದ್ದ ಹೋಟೆಲ್ನಲ್ಲಿ ಬಟ್ಟೆ ಇಲ್ಲದೆ ತಿರುಗಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವಕ್ತಾರ ಸ್ಟೀಫನ್ ಪ್ರಕಾರ, ಜರ್ಮನ್ ಮಹಿಳೆ ಕೋಪಗೊಂಡಿದ್ದಳು ಮತ್ತು ದುಃಖದ ಸ್ಥಿತಿಯಲ್ಲಿದ್ದಳು. ಇನ್ನು ಕೆಲವು ದಿನ ಇಲ್ಲೇ ಇರಲು ಬಯಸುತ್ತಿರುವಾಗಲೇ ಮನೆಯಿಂದ ತಂದಿದ್ದ ಹಣವೆಲ್ಲ ಮುಗಿದಿದೆ ಎಂದು ಹೇಳಿದಳು. ಈ ಘಟನೆಯ ನಂತರ ಅರ್ಚಕರು ದೇವಾಲಯವನ್ನು ಶುದ್ಧೀಕರಿಸಿದ್ದಾರೆ ಎಮದು ವರದಿ ತಿಳಿಸಿದೆ.