ನ್ಯೂಸ್ ನಾಟೌಟ್: ಸುಳ್ಯದ ಕೊಡಿಯಾಲ ಬೈಲ್ನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ತಾಲೂಕು ಪಂಚಾಯತ್ ಕಚೇರಿಗೆ ಸ್ಥಳಾಂತರಿಸಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಮಾಡಿದ್ದಾರೆ.
ಕೊಡಿಯಾಲ ಬೈಲ್ ಗೆ ಯಾವುದೇ ಬಸ್ ಸಂಚಾರ ಇರುವುದಿಲ್ಲ, ವಿದ್ಯಾರ್ಥಿಗಳು, ಹಾಸ್ಟೆಲ್ ಗಳ ಬಗ್ಗೆ ಸ್ಕ್ಯಾಲರ್ ಶಿಪ್, ಪ್ರತಿಭಾ ಪುರಸ್ಕಾರ, ಜಾತಿ ಸಿಂಧುತ್ವ, ವಿದೇಶಿ ವ್ಯಾಸಂಗ, ಕಾನೂನು ವಿದ್ಯಾರ್ಥಿಗಳಿಗೆ ಸ್ಟೈಫಂಡ್, ಸಮುದಾಯ ಭವನ, ಇವುಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಅರ್ಜಿ ಸಲ್ಲಿಸಲು, ಸಹಿ ಹಾಕಿಸಲು ಅಥವಾ ಇತರೆ ಕೆಲಸಗಳಿಗೆ ಆಗಾಗ್ಗೆ ಬಾಡಿಗೆ ವಾಹನಗಳಲ್ಲಿ ದುಬಾರಿ ವೆಚ್ಚ ಭರಿಸಿ ಹೋಗಬೇಕಾಗುತ್ತದೆ. ಇದು ಬಡ ಕುಟುಂಬಗಳಿಗೆ ಕಷ್ಟಕರವಾಗಿರುವುದರಿಂದ ಅನುಕೂಲಕರ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.