ನ್ಯೂಸ್ ನಾಟೌಟ್ : ಕರ್ನಾಟಕ ಕರಾವಳಿ ಮೀನುಗಾರಿಕಾ ನಿಯಂತ್ರಣ ಪ್ರಕಾರ ಯಾವುದೇ ಬಲೆಗಳನ್ನು ಉಪಯೋಗಿಸುವ ಎಲ್ಲಾ ಯಾಂತ್ರಿಕ ದೋಣಿಗಳು ಸಮುದ್ರಕ್ಕೆ ಇಳಿಯುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ.
ಮಳೆ ತೀವ್ರತೆಯ ಮನ್ಸೂಚನೆಯಾಗಿ ಜೂ . 1 ರಂದು ಜುಲೈ 30 ರ ತನಕ ಕರಾವಳಿಯಲ್ಲಿ ಮೀನುಗಾರಿಕಾ ನಿಷೇಧ ಹೊರಡಿಸಿದೆ. ಜೂನ್ ತಿಂಗಳಿನಲ್ಲಿ ಮುಂಗಾರು ರಾಜ್ಯಕ್ಕೆ ಪ್ರವೇಶವಾಗಲಿದ್ದು ಈ ನಿಟ್ಟಿನಲ್ಲಿ ಕಡಲು ಹೆಚ್ಚು ಪ್ರಕ್ಷುಬ್ದವಾಗಿರುವುದು ಮತ್ತು ಮೀನುಗಳು ಸಂತಾನೋತ್ಪತ್ತಿ ಮಾಡುವ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಬೋಟ್ ಹಾಗೂ ದೋಣಿಗಳ ಬಳಸಿ ಮೀನುಗಾರಿಕೆ ನಿಷೇಧ ಮಾಡಿದ್ದಾರೆ .
ಆದೇಶ ಉಲ್ಲಂಘನೆ ಮಾಡಿ ಮೀನುಗಾರಿಕೆ ಮಾಡಿದರೆ ಕರ್ನಾಟಕ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆ 1986 ಪ್ರಕಾರ ದಂಡ ಹಾಗೂ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.