ನ್ಯೂಸ್ ನಾಟೌಟ್: ‘ದಿ ಕೇರಳ ಸ್ಟೋರಿ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.ಈ ಚಿತ್ರದ ಬಗ್ಗೆ ಹಲವು ಪರ-ವಿರೋಧ ಚರ್ಚೆಗಳು ಕೇಳಿ ಬಂದಿದ್ದವು.ಇದರ ಬೆನ್ನಲ್ಲೇ ಇದೀಗ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಮಣಮುರಿದು ಮಾತನಾಡಿದ್ದಾರೆ.ಈ ಸಿನಿಮಾ ವಿಚಾರದಲ್ಲಿ ಅವರು ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿದ್ದಾರೆ.
‘ಸಿನಿಮಾ ಯಾವಾಗಲೂ ಜನರಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಪ್ರೀತಿಯನ್ನು ಬೆಳೆಸುವಂತಿರ ಬೇಕು ಎಂದಿದ್ದಾರೆ. ಅದನ್ನು ಪ್ರಚಾರ ಮಾಡುವುದು ನಮ್ಮ ಜವಾಬ್ದಾರಿ. ಒಂದು ಚಿತ್ರಕ್ಕೆ ಸಾಮಾಜಿಕ ಸಾಮರಸ್ಯವನ್ನು ಒಡೆಯುವ ಶಕ್ತಿ ಇದ್ದರೆ ಅದು ತಪ್ಪು ಎಂಬ ಉತ್ತರ ನೀಡಿದ್ದಾರೆ. ನಾವು ಜಗತ್ತನ್ನು ಒಂದುಗೂಡಿಸಬೇಕೇ ಹೊರತು ವಿಭಜಿಸುವ ಪ್ರಯತ್ನ ಮಾಡಬಾರದು ಎಂದು ನವಾಜುದ್ದೀನ್ ಸಿದ್ದಿಕಿ ಹೇಳಿದ್ದು, ಈ ಮೂಲಕ ‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ದಿ ಕೇರಳ ಸ್ಟೋರಿ’ ಸಿನಿಮಾಗೆ ಸುದೀಪ್ತೋ ಸೇನ್ ನಿರ್ದೇಶನ ಇದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿಪುಲ್ ಶಾ ಬಂಡವಾಳ ಹೂಡಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.