ನ್ಯೂಸ್ ನಾಟೌಟ್ : ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
ನಾಣ್ಯದ ಎಡಭಾಗದಲ್ಲಿ “ಭಾರತ್” ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿ ಹಾಗೂ ಬಲಭಾಗದಲ್ಲಿ “ಇಂಡಿಯಾ” ಎಂಬ ಪದವನ್ನು ಇಂಗ್ಲಿಷ್ನಲ್ಲಿ ಬರೆಯಲಾಗುತ್ತದೆ. ನಾಣ್ಯದ ಒಂದು ಬದಿಯು ಅಶೋಕ ಸ್ತಂಭದ ಸಿಂಹದ ಚಿತ್ರವನ್ನು ಹೊಂದಿರುತ್ತದೆ, ಅದರ ಕೆಳಗೆ “ಸತ್ಯಮೇವ ಜಯತೆ” ಎಂಬ ಪದಗಳಿವೆ.
ಈ ನಾಣ್ಯದ ಇನ್ನೊಂದು ಬದಿಯು ಸಂಸತ್ತಿನ ಸಂಕೀರ್ಣದ ಚಿತ್ರವನ್ನು ತೋರಿಸುತ್ತದೆ. “ಸಂಸದ್ ಸಂಕುಲ್” ಪದಗಳನ್ನು ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ಮತ್ತು ಕೆಳಗಿನ ಪರಿಧಿಯಲ್ಲಿ “ಪಾರ್ಲಿಮೆಂಟ್ ಕಾಂಪ್ಲೆಕ್ಸ್” ಅನ್ನು ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಎಂದು ವರದಿ ತಿಳಿಸಿದೆ.
ದೇವನಾಗರಿ ಲಿಪಿ ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಲಿಪಿ. ದೇವನಾಗರಿ ಲಿಪಿಯನ್ನು ಹಿಂದಿ, ಮರಾಠಿ, ನೇಪಾಲಿ ಹಾಗೂ ಸಂಸ್ಕೃತ ಭಾಷೆಗಳನ್ನು ಬರೆಯಲು ಉಪಯೋಗಿಸುತ್ತಾರೆ. ಇದಲ್ಲದೆ ಭೋಜಪುರಿ, ಕೊಂಕಣಿ, ಮೈಥಿಲಿ ಮುಂತಾದ ಪ್ರಾದೇಶಿಕ ಭಾಷೆಗಳನ್ನು ಬರೆಯಲೂ ಉಪಯೋಗಿಸುತ್ತಾರೆ ಈ ಕಾರಣಕ್ಕಾಗಿ ಮತ್ತು ಭಾರತದ ಭಾಷಾ ಹಿರಿಮೆಯನ್ನು ಸಾರಲು ದೇವನಾಗರಿ ಲಿಪಿ ಬಳಸಲಾಗಿದೆ.