ನ್ಯೂಸ್ ನಾಟೌಟ್: ಮಾಣಿ ಜಂಕ್ಷನ್ನಲ್ಲಿ ನಡೆದ ಗ್ಯಾಂಗ್ ವಾರ್ ಗಲಾಟೆಗೆ ರೋಚಕ ತಿರುವು ಸಿಕ್ಕಿದೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತಂಡಗಳಿಂದ ವಿಟ್ಲ ಠಾಣೆಯಲ್ಲಿ ದೂರು -ಪ್ರತಿದೂರು ದಾಖಲಾಗಿದೆ.
ಬಿಜೆಪಿ ಕಾರ್ಯಕರ್ತ ಮಾಣಿ ಕೊಡಾಜೆಯ ನಿವಾಸಿ ಮಹೇಂದ್ರ (೨೬ ವರ್ಷ) ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಲ್ಲೆ ನಡೆದಿರುವ ಬಗ್ಗೆ ದೂರು ನೀಡಿದ್ದಾರೆ. ಅನಂತಾಡಿ ನಿವಾಸಿ ಪ್ರವೀಣ್ ನಾಯ್ಕ್ (೨೮ ವರ್ಷ) ಪ್ರತಿ ದೂರು ನೀಡಿದ್ದಾರೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಹೇಂದ್ರ ನೀಡಿದ ದೂರಿನಂತೆ ಪೊಲೀಸರು ರಾಕೇಶ್ , ಮಂಜುನಾಥ್, ರಾಜೇಶ್ ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹತ್ಯಾ ಯತ್ನ, ಕೊಲೆ, ಬೆದರಿಕೆ ಪ್ರಕರಣಗಳು ಆರೋಪಿಗಳ ಮೇಲೆ ಹಾಕಲಾಗಿದೆ. ಪ್ರವೀಣ್ ನೀಡಿದ ದೂರಿನ ಪ್ರಕಾರ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್ , ದೇವಿ ಪ್ರಸಾದ್ , ಹರೀಶ್ ವಿರುದ್ಧ ಪ್ರಕರಣ ದಾಖಲಾಗಿದೆ. 6 ಮಂದಿ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ಕೇಸ್ ದಾಖಲಿಸಲಾಗಿದೆ.