ನ್ಯೂಸ್ ನಾಟೌಟ್ : ಸಲಿಂಗ ವಿವಾಹದ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಸೋಮವಾರ(ಮೇ.22 ರಂದು) ಸಲಿಂಗಿ ಜೋಡಿಯೊಂದು ವಿವಾಹವಾಗಿದ್ದು, ನಡೆದಿದ್ದು ತಡವಾಗಿ ವೈರಲ್ ಆಗುತ್ತಿದೆ. ಕೋಲ್ಕತ್ತಾದ ಅರಿಟೋಲಾ ಪ್ರದೇಶದಲ್ಲಿ ಭೂತನಾಥ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ, ಬಂಗಾಳಿ ಆಚರಣೆಯೊಂದಿಗೆ ಸಲಿಂಗಿ ಜೋಡಿ ಮೌಸುಮಿ ದತ್ತಾ ಮತ್ತು ಮೌಮಿತಾ ಮಜುಂದಾರ್ ವಿವಾಹವಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಯವಾದ ಮೌಸುಮಿ ದತ್ತಾ ಮತ್ತು ಮೌಮಿತಾ ಮಜುಂದಾರ್ ಡೇಟಿಂಗ್ ಮಾಡಿ, ಪ್ರೀತಿಸಲು ತೊಡಗಿದ್ದಾರೆ. ತಮ್ಮ ಮದುವೆಯನ್ನು ಹೆಚ್ಚು ಬಹಿರಂಗಪಡಿಸದೆ ಮಧ್ಯರಾತ್ರಿ ದೇವಾಲಯದಲ್ಲಿ ಹಾರವನ್ನು ಬದಲಾಯಿಸಿಕೊಂಡು, ಹಣೆಗೆ ಸಿಂಧೂರವನ್ನಿಟ್ಟು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಲಿಂಗಿ ಸಮುದಾಯಕ್ಕೆ ಇದು ಮಾದರಿ ಆಗಬೇಕೆನ್ನುವ ನಿಟ್ಟಿನಲ್ಲಿ ಮದುವೆಯ ಫೋಟೋಗಳನ್ನು ಜೋಡಿ ಹಂಚಿಕೊಂಡಿದೆ. ಸದ್ಯ ಬಾಡಿಗೆಯ ಅಪಾರ್ಟ್ ಮೆಂಟ್ ನಲ್ಲಿ ಜೋಡಿ ವಾಸಿಸುತ್ತಿದ್ದು, ಶೀಘ್ರದಲ್ಲಿ ಊರಿನಿಂದ ದೂರದ ಪ್ರದೇಶಕ್ಕೆ ಪ್ರವಾಸಕ್ಕೆ ಹೊರಡಿಲಿದ್ದಾರೆ ಎಂದು ಜೋಡಿ ಹೇಳಿದೆ.