ನ್ಯೂಸ್ ನಾಟೌಟ್ : ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ಖಾಸಗಿ ಸಮಾರಂಭವೊಂದರಲ್ಲಿ ವಿವಾಹವಾಗಿದ್ದಾರೆ. ಕೊಲ್ಕತ್ತಾ ಕ್ಲಬ್ನಲ್ಲಿ ಗುರುವಾರ ವಿವಾಹ ನಡೆದಿದ್ದು, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಈ ಹಿಂದೆ ಶಕುಂತಲಾ ಬರುವಾ ಅವರ ಮಗಳು ರಾಜೋಶಿ ಬರುವಾ ಅವರನ್ನು ಮದುವೆಯಾಗಿದ್ದರು.
ಗುವಾಹಟಿಯವರಾಗಿರುವ ರೂಪಾಲಿ ಕೊಲ್ಕತ್ತಾದ ಫ್ಯಾಷನ್ ಸ್ಟೋರ್ ಜೊತೆ ಕೆಲಸ ಮಾಡುತ್ತಿದ್ದು, ಆಶಿಶ್ ಹಾಗೂ ರೂಪಾಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ನಾನು ನನ್ನ ಜೀವನದ ಈ ಘಟ್ಟದಲ್ಲಿ ನಾನು ರೂಪಾಲಿಯನ್ನು ಮದುವೆಯಾಗುತ್ತಿರುವುದು ವಿಶೇಷವಾದ ಭಾವನೆ. ನಾವು ಇಂದು ಬೆಳಗ್ಗೆ ರಿಜಿಸ್ಟರ್ ಮದುವೆಯಾಗಿದ್ದೇವೆ.
ಸಂಜೆ ಒಂದು ಸಣ್ಣ ಗೆಟ್ ಟು ಗೆದರ್ ನಡೆಯಲಿದೆ ಎಂದಿದ್ದಾರೆ. ನಮಗಿಬ್ಬರಿಗಿಗೂ ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆನ್ನುವ ಆಸೆ ಇತ್ತು ಎಂದಿದ್ದಾರೆ. ಆಶಿಶ್ ವಿದ್ಯಾರ್ಥಿ ಹಲವಾರು ಸಿನಿಮಾ ಇಂಡಸ್ಟ್ರಿಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ, ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ, ಅವರ ಸಿನಿಮಾ ಕೆರಿಯರ್ 1989ರಲ್ಲಿ ಶುರುವಾಯಿತು. ನಟ ಈ ತನಕ ಸುಮಾರು 11 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ.