ನ್ಯೂಸ್ ನಾಟೌಟ್: ಮತಾಂಧರ ದುಷ್ಕೃತ್ಯಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದು ಹಿಂದೂ ಸಂಘಟನೆ ಕಾರ್ಯಕರ್ತರು ಹೊರತು ಬಿಜೆಪಿ ಅಲ್ಲ ಎಂದು ಹಿಂದೂ ಮಹಾಸಭಾ ತಿಳಿಸಿದೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಹಿಂದೂ ಸಭಾದ ಪ್ರಮುಖರು, ನೆಟ್ಟಾರು ಕುಟುಂಬಕ್ಕೆ ನಳೀನ್ ಕುಮಾರ್ ಕಟೀಲ್ ಮನೆಕಟ್ಟಿಕೊಟ್ರು ಅಂತ ಹೇಳ್ತಾರೆ, ನಳೀನ್ ಅವ್ರ ಕಾರು ಅಂದು ಅಲುಗಾಡಿಸಿದ್ದಕ್ಕೆ ಮನೆ ಕಟ್ಟಿಕೊಟ್ರು, ನಿಜವಾಗಿ ನಳೀನ್ ಅವ್ರ ಕಾರನ್ನ ಅಲುಗಾಡಿಸಬಾರ್ದಿತ್ತು, ನಳೀನ್ ಅವ್ರನ್ನೇ ಅಲುಗಾಡಿಸಬೇಕಿತ್ತು ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ರು.
ಹಿಂದೂ ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನೀತ್ ಸುವರ್ಣ ಮಾತನಾಡಿ, ಹಿಂದೂ ಮಹಾಸಭಾ ತತ್ವ ಸಿದ್ಧಾಂತವನ್ನ ಅನುಸರಿಸಿಕೊಂಡು ಬರುತ್ತದೆ. ನಮ್ಮ ತತ್ವ ಸಿದ್ಧಾಂತ ವೀರ ಸಾವರ್ಕರ್, ನಾಥೂರಾಂ ಗೋಡ್ಸೆ ಅವರದ್ದು. ನಾನು ಎದೆತಟ್ಟಿ ಹೇಳ್ತೆನೆ ನಾನು ಗಾಂಧಿವಾದಿ ಅಲ್ಲ, ಗೋಡ್ಸೆವಾದಿ. ಅಖಂಡ ಭಾರತದ ಹಿಂದೂ ರಾಷ್ಟ್ರದ ಮುನ್ನುಡಿ ಬರೆದವ್ರು ಗೋಡ್ಸೆ ಎಂದು ತಿಳಿಸಿದರು.