ಸುಳ್ಯ

ಸುಳ್ಯ : ಬಿಜೆಪಿ ಮುಖಂಡ ದಿ.ನವೀನ್ ರೈ ಮೇನಾಲ ನುಡಿ ನಮನ ಕಾರ್ಯಕ್ರಮ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ಭಾವಪೂರ್ಣ ಶ್ರದ್ಧಾಂಜಲಿ

ನ್ಯೂಸ್ ನಾಟೌಟ್ : ಮೇ 18 ಕ್ಕೆ ಪಂಪ್ ಸರಿ ಮಾಡಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಮೃತ್ಯುಪಟ್ಟ ಬಿಜೆಪಿ ಮುಖಂಡ ,ಜಿಲ್ಲಾಪಂಚಾಯತ್ ಸದಸ್ಯ ನವೀನ್ ರೈ ಮೇನಾಲ ಅವರಿಗೆ ಬಿಜೆಪಿ ಕಾರ್ಯಕರ್ತರಿಂದ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ಸುಳ್ಯದ ಬಿಜೆಪಿ ಕಚೇರಿಯಲ್ಲಿ ಇಂದು(ಮೇ 22) ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ , ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ ತೀರ್ಥರಾಮ ಜಿ.ಪಿ ನಾಯಕ್ , ಎನ್ ಎಂ ಸಿ ನಿವೃತ ಪ್ರಾಂಶುಪಾಲೆ ಯಶೋದ ರಾಮಚಂದ್ರ , ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿ ಸುರೇಶ್ ಕಣೆಮರಡ್ಕ, ಸುಳ್ಯ ಜಿ.ಪಂ . ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಎಸ್ .ಎನ್ ಮನ್ಮಥ ,ಪುತ್ತೂರು ತಾ.ಪಂ ಸದಸ್ಯೆ ಪುಲಸ್ತ್ಯ ರೈ, ಸುಭೋದ್ ಶೆಟ್ಟಿ , ಜಿಲ್ಲಾ ಪಂಚಾಯತ್ ಅಧ್ಯಕ್ಷ ನವೀನ್ ರೈ ಅವರ ಸ್ವಭಾವ ಗುಣ , ನಡತೆ , ಶಿಸ್ತು, ಕಾರ್ಯನಿರ್ವಹಣೆ , ಕುಟುಂಬ ಮತ್ತು ಅವರ ಅಗಲಿಕೆಯ ಬಗ್ಗೆ ಸಂತಾಪದ ನುಡಿ ನಮನ ಸಲ್ಲಿಸಿದರು .

ಈ ವೇಳೆ ನವೀನ್ ರೈ ಫೊಟೋಗೆ ಪುಷ್ಪನಮನ ಹಾಗೂ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಿದರು . ವೇಳೆ ಬಿಜೆಪಿ ಕಾರ್ಯಕರು ರ್ತರು ಉಪಸ್ಥಿತರಿದ್ದ. ಬಿಜೆಪಿ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಸುಳ್ಯ :ಎನ್ನೆಂಸಿ, ಎನ್.ಎಸ್.ಎಸ್ ಮತ್ತು ಯುವ ರೆಡ್ ಕ್ರಾಸ್ ವತಿಯಿಂದ ‘ಸಂವಿಧಾನ ದಿನಾಚರಣೆ’

ಸುಳ್ಯ-ಆಲೆಟ್ಟಿ: ಮೂರು ದಿನವಾದರೂ ಸಿಕ್ಕಿಲ್ಲ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರ್ಮಿಕ, ರಭಸದಿಂದ ಹರಿಯುವ ನೀರನ್ನು ಲೆಕ್ಕಿಸದೆ ಕಾರ್ಯಾಚರಣೆ

ದೊಡ್ಡಡ್ಕ : ‘ಲಯನ್ಸ್ ಕ್ಲಬ್ ಸಂಪಾಜೆ’ ನೂತನ ಪ್ರಯಾಣಿಕರ ಬಸ್ ತಂಗುದಾಣ ಉದ್ಘಾಟನೆ