ನ್ಯೂಸ್ ನಾಟೌಟ್: ಕೇರಳ ರಾಜ್ಯದ ಕೆಲವು ಪಡ್ಡೆ ಯುವಕರು ಇದೀಗ ರಾತ್ರಿ 11 ಗಂಟೆಯ ನಂತರ ಗಡಿ ಭಾಗವಾದ ಮಾಕ್ಕೂಟ ಚೆಕ್ಪೋಸ್ಟ್ ಮೂಲಕ ಮಡಿಕೇರಿಗೆ ವಾರಕ್ಕೆ 2 ಬಾರಿ ಪ್ರವೇಶಿಸಿ ಪೆರುಂಬಾಡಿ ತನಕ ಬಂದು ರಾತ್ರಿ 4ರ ಬೆಳಗ್ಗಿನ ಜಾವ ಹಿಂತಿರುಗುತ್ತಿದ್ದಾರೆ.
ಕೆಲವು ಹುಡುಗರ ವಾಹನದಲ್ಲಿ ಮಾರಕ ಆಯುಧಗಳು ಕೂಡ ಇರುತ್ತದೆ ಎಂದು ಅ ಭಾಗದ ಜನರು ಹೇಳುತ್ತಾರೆ. ಕಳೆದ ಒಂದು ವರ್ಷದಿಂದ ಇದು ನಡೆಯುತ್ತಿದೆ. ಚೆಕ್ಪೋಸ್ಟ್ನಲ್ಲಿರುವ ಪೊಲೀಸರು ಹಲವು ಬಾರಿ ಇವರಿಗೆ ಎಚ್ಚರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವರನ್ನು ಪ್ರಶ್ನಿಸಿದರೆ ರಾತ್ರಿ ಕೇರಳದಲ್ಲಿ ತಾಪಮಾನ ಹೆಚ್ಚಿರುವುದರಿಂದ ತಂಪಾದ ಗಾಳಿ ಸವಿಯಲು ಮಡಿಕೇರಿಗೆ ಬಂದಿರುವುದಾಗಿ ಹೇಳುತ್ತಾರೆ.
ತಂಡೊಪ್ಪ ತಂಡವಾಗಿ ದ್ವಿಚಕ್ರ ವಾಹನದಲ್ಲಿ ಬರುವ ಈ ಪುಂಡ ಹುಡುಗರಲ್ಲಿ ಹೆಚ್ಚಿನವರು ಕಣ್ಣೂರ್ ಇರ್ರಿಟಿ, ಮಟ್ಟನೋರ್ ಭಾಗದವರು ಎಂದು ತಿಳಿದು ಬಂದಿದೆ. ಈ ಹಿಂದೆ ಇರ್ರಿಟಿ, ವಲಿತೋಡು ರಸ್ತೆಗಳಲ್ಲಿ ಓಡಾಡುವ ಬೀದಿ ನಾಯಿಗಳು ರಸ್ತೆಯಲ್ಲಿ ಕುತ್ತಿಗೆ, ಬೆನ್ನು ಭಾಗಕ್ಕೆ ಕಡಿದ ಗಾಯಗಳಿಂದ ಹಲವಾರು ನಾಯಿಗಳು ಮೃತಪಟ್ಟಿವೆ. ಇದು ಪುಂಡ ಹುಡುಗರ ಕೃತ್ಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಾಕುಟಾ ಪ್ರದೇಶವು ರಕ್ಷಿತಾ ಅರಣ್ಯವಾಗಿದ್ದು, ಅರಣ್ಯ ಇಲಾಖೆ ಕೂಡ ಗಮನ ಹರಿಸಬೇಕಾಗಿದೆ. ಜಿಲ್ಲಾ ಪೊಲೀಸ್ ಸಮಗ್ರ ಮಾಹಿತಿ ಪಡೆದು ಸೂಕ್ತ ಕ್ರಮ ಜಾರಿಗೊಳಿಸದ್ದಿದರೆ ಮುಂದೆ ಹೆಚ್ಚಿನ ಅನಾಹುತಕ್ಕೆ ಕಾರಣವಾಗಲಿದೆ.