ನ್ಯೂಸ್ ನಾಟೌಟ್: ಮೆಸ್ಕಾಂನ ಮಣಿಪಾಲ ಉಪ ವಿಭಾಗ ಕಚೇರಿಯಲ್ಲಿ ಮೇ 23ರಂದು ಬೆಳಗ್ಗೆ 10:30ಕ್ಕೆ ಜನಸಂಪರ್ಕ ಸಭೆ ನಡೆಯಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗ್ರಾಹಕರು ದೂರವಾಣಿ ಸಂಖ್ಯೆ: 0820-2573699ನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪ್ರಣಾಳಿಕೆಗಳಿಂದ ಗೊಂದಲಕ್ಕಿಡಾಗಿರುವ ಜನರಿಗೆ ಮಾಹಿತಿ ನೀಡಲು ಮತ್ತು ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಿಂದ ಈ ಜನ ಸಂಪರ್ಕ ಸಭೆ ಕರೆಯಲಾಗಿದ್ದು, ದೂರವಾಣಿ ಮೂಲಕ ಸಮಸ್ಯೆಗಳನ್ನು, ಗೊಂದಲಗಳನ್ನು ನಿವಾರಿಸಿಕೊಳ್ಳಲು ಮೆಸ್ಕಾಂ ಚಿಂತನೆ ನಡೆಸಿದೆ ಎಮದು ವರದಿಗಳು ತಿಳಿಸಿವೆ.