ನ್ಯೂಸ್ ನಾಟೌಟ್: ಭಾರತದ ಬಹುತೇಕ ರಾಜ್ಯಗಳಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದು ಸೊಳ್ಳೆಯಿಂದ ಹರಡುವ ಈ ರೋಗವಾಗಿದ್ದು, ಸರ್ಕಾರದ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.
ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಇದನ್ನು ಎದುರಿಸಲು ಲಸಿಕೆ ಅಭಿವೃದ್ಧಿಪಡಿಸಲು ತನ್ನ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ. ದೇಶದ ಅತ್ಯುನ್ನತ ಸಂಸ್ಥೆಯಾದ ICMR ಡೆಂಗ್ಯೂ ಲಸಿಕೆಗಳ ಹಂತ-III ಪ್ರಯೋಗಗಳನ್ನು ನಡೆಸಲು ಪ್ಯಾನೇಸಿಯಾ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಎಂಬ ಎರಡು ಜೈವಿಕ ತಂತ್ರಜ್ಞಾನ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
*ತಲೆನೋವು
*ಕಣ್ಣುಗಳ ಹಿಂದೆ ನೋವು
*ಜ್ವರ
*ಊದಿಕೊಂಡ ಗ್ರಂಥಿಗಳು
*ವಾಕರಿಕೆ
*ಕೀಲುಗಳು, ಸ್ನಾಯು ಅಥವಾ ಮೂಳೆಗಳಲ್ಲಿ ನೋವು
2017 ರಲ್ಲಿ 188401, 2019 ರಲ್ಲಿ 157315 ಮತ್ತು 2021 ರಲ್ಲಿ 193245 ಪ್ರಕರಣಗಳು ದಾಖಲಾಗಿವೆ. 2023 ಜನವರಿಯಲ್ಲಿ ದೆಹಲಿಯಲ್ಲಿ 14 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು. ಆಗ್ನೇಯ ಏಷ್ಯಾದ ಅನೇಕ ಭಾಗಗಳಲ್ಲಿ ಡೆಂಗ್ಯೂ ವಾರ್ಷಿಕ ಸಾಂಕ್ರಾಮಿಕವಾಗಿ ಮಾರ್ಪಟ್ಟಿದೆ.
ಪರಿಸರ ಬದಲಾದಂತೆ ರೋಗ ಹೆಚ್ಚು ಅಪಾಯಕಾರಿಯಾಗುತ್ತಿದೆ. ಇತ್ತೀಚೆಗೆ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಯಿತು. ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಆದರೀಗ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು ಆತಂಕವನ್ನು ಸೃಷ್ಟಿ ಮಾಡಿವೆ.