ನ್ಯೂಸ್ ನಾಟೌಟ್ : ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗಳು ನಡಿತಿವೆ.ಇನ್ನೂ ಅಂತಿಮ ಘೋಷಣೆಯಾಗಿಲ್ಲ.ಅಷ್ಟರಲ್ಲೇ ಜನ ಈಗ ಜೂನ್ ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಲ್ಲವೆಂದು ಪಟ್ಟು ಹಿಡಿದಿದ್ದಾರೆ.
ಹೌದು,ಕಾಂಗ್ರೆಸ್ ಅಧಿಕಾರಕ್ಕೇರಲು ಬಳಸಿದ ಗ್ಯಾರಂಟಿ ಸೂತ್ರವೇ ಇದಕ್ಕೆ ಕಾರಣ. ಮೊನ್ನೆಯಷ್ಟೇ ಚಿತ್ರದುರ್ಗದಲ್ಲಿಯೂ ಇಂತಹದ್ದೊಂದು ಘಟನೆ ವರದಿಯಾಗಿತ್ತು. ಇದೀಗ ಕರಾವಳಿಯ ಉಡುಪಿಯಲ್ಲೂ ವ್ಯಕ್ತಿಯೋರ್ವ ‘ನಾನಿನ್ನು ಕರೆಂಟ್ ಬಿಲ್ ಕಟ್ಟಲ್ಲ ಬಿಲ್ ಕೊಡಬೇಡಿ’ ಎಂದು ವಿದ್ಯುತ್ ಮೀಟರ್ ಬಳಿ ಬೋರ್ಡ್ ಅಳವಡಿಸಿದ ಪ್ರಸಂಗ ನಡೆದಿದೆ.
ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಮೀಟರ್ ಬೋರ್ಡ್ಗೆ ಚೀಟಿ ಅಂಟಿಸಿರುವ ವಾಸುದೇವ ಭಟ್, ಮೆಸ್ಕಾಂನವರೇ ಕ್ಷಮಿಸಿ ಜೂನ್ ತಿಂಗಳಿಂದ ನಮಗೆ ಕರೆಂಟ್ ಬಿಲ್ ಕೊಡಬೇಡಿ. ನಾವು ಬಿಲ್ ಕಟ್ಟಲ್ಲ ಎಂದು ಚೀಟಿ ಅಂಟಿಸಿದ್ದಾರೆ.ನಾನು ಸೇರಿದಂತೆ ಯಾರೂ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಶೇಕಡಾ 95 ಜನತೆ ಇದರ ಲಾಭ ಪಡೆಯಬಹುದು ಎಂದು ಡಿಕೆಶಿ ಹೇಳಿದ್ದಾರೆ. ಡಿಕೆಶಿ ಹೇಳಿರುವ ಶೇಕಡಾ 95ರ ಒಳಗೆ ನಾನು ಕೂಡ ಬರುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ನಾನು ವಿದ್ಯುತ್ ಬಿಲ್ ಕಟ್ಟಲ್ಲ. ನಾನು ತಿಂಗಳಿಗೆ 200 ಯೂನಿಟ್ ಖರ್ಚು ಮಾಡುತ್ತಿಲ್ಲ. ನಾನು ಫಲಾನುಭವಿ ಆಗಿರುವುದರಿಂದ ಮೀಟರ್ ಬೋರ್ಡಿನಲ್ಲಿ ಫಲಕ ಹಾಕಿದ್ದೇನೆ ಎಂದಿದ್ದಾರೆ.