ನ್ಯೂಸ್ ನಾಟೌಟ್: ಸಮಾಜ ಎಷ್ಟೋ ಮುಂದುವರಿದರೂ ಕೆಲವೊಂದು ಘಟನೆಗಳು ವ್ಯವಸ್ಥೆಯನ್ನು ತುಂಬಾ ಕೆಳಮಟ್ಟಕ್ಕೆ ತಂದು ನಿಲ್ಲಿಸುತ್ತದೆ. ಇಂಥದೊಂದು ಘಟನೆ ಮಧ್ಯಪ್ರದೇಶದ ಕೋಟಾ ಗ್ರಾಮದಲ್ಲಿ ನಡೆದಿದೆ.
ಮಧ್ಯಪ್ರದೇಶದ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಎಂಬುವರ ಪುತ್ರಿ ಮಾಧುರಿ (13) ಎಂಬಾಕೆಯನ್ನು ಅನಾರೋಗ್ಯದಿಂದಾಗಿ ಶಹದೋಲ್ ಪ್ರದೇಶದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಳು.
ಅಲ್ಲದೇ ಶಹದೋಲ್ ಪ್ರದೇಶದ ಸರ್ಕಾರಿ ಆಸ್ಪತ್ರೆಯೂ ಗ್ರಾಮದಿಂದ 70 ಕಿ.ಮೀ. ದೂರದಲ್ಲಿತ್ತು. ಆದರೆ ಮಗಳ ಮೃತದೇಹವನ್ನು ಊರಿಗೆ ಕರೆತರಲು ಲಕ್ಷ್ಮಣ್ ಸಿಂಗ್ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಕೇಳಿದಾಗ ಆಸ್ಪತ್ರೆಯವರು 15 ಕಿ.ಮೀ.ಕ್ಕಿಂತ ದೂರದ ಪ್ರದೇಶಕ್ಕೆ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ ಎಂದು ತಿಳಿಸಿದ್ದಾರೆ. ಖಾಸಗಿ ಆ್ಯಂಬ್ಯುಲೆನ್ಸ್ ಮಾಡಲು ಹಣವಿಲ್ಲದ ಕಾರಣ ಮಗಳ ಮೃತದೇಹವನ್ನು ಬೈಕ್ನಲ್ಲಿ ಹೊತ್ತುಕೊಂಡ ಹೋಗಬೇಕಾಯಿತು. ಎಷ್ಟೋ ಅಭಿವೃದ್ಧಿ ಆದರೂ ಸರ್ಕಾರದ ವ್ಯವಸ್ಥೆ ಅಥವಾ ಸಮಾಜ ಇಷ್ಟೊಂದು ಕೀಳುಮಟ್ಟಕ್ಕೆ ಈ ದೃಶ್ಯ ಮಾತ್ರ ಮಾನವ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಲಕ್ಷ್ಮಣ್ ಸಿಂಗ್ ಅವರು ಇನ್ನೇನು ಊರಿಗೆ ತಲುಪಲು 20 ಕಿ.ಮೀ. ದೂರವಿರುವಾಗ ಬೇರೊಂದು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಹದೋಲ್ನ ಜಿಲ್ಲಾಧಿಕಾರಿ ವಂದನಾ ವೈದ್ಯ ಅವರು ಬೈಕ್ನಲ್ಲಿ ಹೋಗುತ್ತಿದ್ದವರನ್ನು ತಡೆದು ಕೂಡಲೇ ವಾಹನದ ವ್ಯವಸ್ಥೆ ಮಾಡಿಸಿ, ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.