ನ್ಯೂಸ್ ನಾಟೌಟ್: ರಾಜಸ್ಥಾನದ ಹುಂಡೈ ಕ್ರೆಟಾ ಎಸ್ಯುವಿ ಮಾಲೀಕ ಖಲೀಲ್ ಮೊಹಮ್ಮದ್, ಪ್ರತಿ ಬಾರಿ ಕಾರು ಓಡಿಸುವಾಗ ಹೆಲ್ಮೆಟ್ ಧರಿಸಿ ಚಲಾಯಿಸುತ್ತಾರೆ ಎನ್ನುವುದು ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯಾಗಿದೆ. ಅಷ್ಟಕ್ಕೂ ಅವರು ಈ ರೀತಿಯಾಗಿ ಏಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಗೆ ಅವರಿಂದ ಸಿಕ್ಕಿದ ಉತ್ತರ ವಿಚಿತ್ರವಾಗಿತ್ತು.
ಖಲೀಲ್ ಅವರು, ಕ್ರೆಟಾ ಕಾರಿನಲ್ಲಿ ಹೋಗುವಾಗ ಹೆಲ್ಮೆಟ್ ಹಾಕದಿರುವ ಕಾರಣ, ಪೊಲೀಸರು ದಂಡ ವಿಧಿಸಿದ್ದರು ಎನ್ನಲಾಗಿದೆ. ಅದಕ್ಕಾಗಿ ಈಗ ಈ ರೀತಿ ಪ್ರಯಾಣಿಸುವ ಮೂಲಕ ಪ್ರತಿಭಟಿಸುತ್ತಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ, ಹೀಗೆ ಒಮ್ಮೆ ಕಾರ್ಯನಿಮಿತ್ತ ಎಲ್ಲಿಗೊ ಹೋಗಬೇಕಾದರೆ, ಖಲೀಲ್ ಅವರನ್ನು ತಡೆದ ಪೊಲೀಸರು ರೂ.2,000 ಬೇಡಿಕೆ ಇಟ್ಟಿದ್ದಾರೆ. ಆದರೆ, ಲಂಚವನ್ನು ಕೊಡಲು ನಿರಾಕರಿಸಿದ್ದಾರೆ. ಬಳಿಕ, ಪೊಲೀಸರು, ಕಾರಿನ ಡಾಕ್ಯುಮೆಂಟ್ ತೋರಿಸುವಂತೆ ಕೇಳಿದ್ದಾರೆ. ಅವೆಲ್ಲ ಸರಿಯಾಗಿರುವುದನ್ನು ಮನಗಂಡ ಪೊಲೀಸರು, ಖಲೀಲ್ ಮದ್ಯಪಾನ ಮಾಡಿ, ಕಾರನ್ನು ಓಡಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಆ ನಂತರವು, ಪೊಲೀಸರು ರೂ.2000 ಲಂಚ ನಿಡುವಂತೆ ಮತ್ತೆ ಕೇಳಿದ್ದಾರೆ. ಇದನ್ನು ಖಲೀಲ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸರು, ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ1000 ರೂಪಾಯಿಗಳ ದಂಡ ಕಟ್ಟುವಂತೆ ಚಲನ್ ನೀಡಿದ್ದಾರೆ. ಎನ್ನಲಾಗಿದೆ. ಅದು ಖಲೀಲ್ ಸಿಟ್ಟಿಗೆ ಕಾರಣವಾಗಿದ್ದು, ವಿಭಿನ್ನವಾಗಿ ಪ್ರತಿಭಟಿಸಲು ಶುರು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.