ನ್ಯೂಸ್ನಾಟೌಟ್: ಇ ಕಾಮರ್ಸ್ ಸಂಸ್ಥೆ ಅಮೆಜಾನ್ ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ಇದುವರೆಗೂ ಜಗತ್ತಿನಾದ್ಯಂತ ಉದ್ಯೋಗಿಗಳ ವಜಾ ಮಾಡುತ್ತಿದ್ದ ಸಂಸ್ಥೆ ಈಗ ಭಾರತದಲ್ಲಿ ತನ್ನ ವಿವಿಧ ವಿಭಾಗಗಳಲ್ಲಿ 500 ಮಂದಿಯನ್ನು ಉದ್ಯೋಗದಿಂದ ವಜಾ ಮಾಡಿದೆ ಎಂದು ವರದಿ ತಿಳಿಸಿದೆ.
ಈ ಹೊಸ ಸುತ್ತಿನ ಉದ್ಯೋಗ ಕಡಿತವು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಮಾರ್ಚ್ನಲ್ಲಿ ಘೋಷಿಸಿದ ಉದ್ಯೋಗ ವಜಾಗಳ ಮುಂದುವರಿದ ಭಾಗವಾಗಿದೆ ಎನ್ನಲಾಗಿದೆ. ಇದು ಸರಿಸುಮಾರು 9,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಗಳು ತಿಳಿಸಿವೆ.
ವೆಬ್ ಸೇವೆಗಳು, ಮಾನವ ಸಂಪನ್ಮೂಲ ಮತ್ತು ಸಪೋರ್ಟಿಂಗ್ ಡಿಪಾರ್ಟ್ಮೆಂಟ್ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಉದ್ಯೋಗ ಕಳೆದುಕೊಂಡವರಲ್ಲಿ ಹಲವು ಮಂದಿ ಭಾರತದಿಂದ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ನ ಜಾಗತಿಕ ತಂಡಗಳ ಭಾಗವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರವು ಆದ್ಯತೆಗಳ ಆಧಾರದಲ್ಲಿ ಮತ್ತು ಆರ್ಥಿಕತೆಯ ಬಗ್ಗೆ ಅನಿಶ್ಚಿತತೆಯಿಂದ ಉದ್ಭವಿಸಿದೆ ಎಂದು ಹೇಳಲಾಗಿದೆ.