ನ್ಯೂಸ್ ನಾಟೌಟ್ : ಕದ್ರಿ ದೇವಸ್ಥಾನದ ಅಂಗಣಕ್ಕೆ ಶುಕ್ರವಾರ (ಮೇ 12) ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಮೂವರು ಮುಸ್ಲಿಂ ಯುವಕರು ನುಗ್ಗಿ ಅನುಮಾನಸ್ಪದವಾಗಿ ವರ್ತಿಸಿದ ಘಟನೆ ಕುರಿತಂತೆ ಇದೀಗ ದೇವಸ್ಥಾನಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಭದ್ರತಾ ಸಿಬ್ಬಂದಿ ಇರುವಾಗಲೇ ದೇವಸ್ಥಾನಕ್ಕೆ ಅಕ್ರಮ ಪ್ರವೇಶಿಸಿ ಪವಿತ್ರವಾದ ದೇವಸ್ಥಾನದ ಅಂಗಣದಲ್ಲಿ ಪಾದರಕ್ಷೆ ಸಹಿತ ದ್ವಿಚಕ್ರ ವಾಹನದಲ್ಲಿ ಸುತ್ತು ಬಂದು ಅಪವಿತ್ರಗೊಳಿಸುವ ಸಂಚು ನಡೆಸಿದ್ದರು ಎನ್ನಲಾಗಿದೆ.
ಈ ಹಿಂದೆ ಶಾಕೀರ್ ಅನ್ನುವಂತಹ ಶಂಕಿತ ಭಯೋತ್ಪಾದಕ ಕುಕ್ಕರ್ ಬಾಂಬ್ ಮೂಲಕ ದೇವಸ್ಥಾನ ಗುರಿಯಾಗಿಟ್ಟುಕೊಂಡಿದ್ದು, ಈ ಯುವಕರು ಅಂತಹ ಭಯೋತ್ಪಾದಕ ಕೃತ್ಯ ಅಥವಾ ದೇವಸ್ಥಾನಕ್ಕೆ ಅಪವಿತ್ರ ನಡೆಸುವ ದುಷ್ಕೃತ್ಯಕ್ಕೆ ಸಂಚು ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕಾಂಗ್ರೆಸ್ ಬಹುಮತ ಸಮೀಕ್ಷೆ ಹಿನ್ನೆಲೆಯಲ್ಲಿ ಜಿಹಾದಿಗಳು ಇಂತಹ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಹಲವರು ಅಭಿಪ್ರಾಯಪಟ್ಟಿದ್ದಾರೆ .
ಹಾಗಾಗಿ ಅವರನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸಬೇಕೆಂಬ ಒತ್ತಡ ಹೆಚ್ಚಾಗಿದ್ದು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರಿಗೆ ಮನವಿ ನೀಡಿದ್ದಾರೆ ಎನ್ನಲಾಗಿದೆ, ಕದ್ರಿ ದೇವಸ್ಥಾನಕ್ಕೆ ಶಾಶ್ವತ ಪೋಲಿಸ್ ಸಿಬ್ಬಂದಿ ನೀಡಿ ಸೂಕ್ತ ಭದ್ರತೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.