ನ್ಯೂಸ್ ನಾಟೌಟ್ : ವಾಹನ ಚಾಲನೆ ಜವಾಬ್ದಾರಿಯುತ ಕೆಲಸ. ವಾಹನ ಕಲಿಯುವ ಸಮಯದಲ್ಲಿ ಒಂದಿಲ್ಲೊಂದು ಅವಾಂತರಗಳು ಆಗುತ್ತಲೇ ಇರುತ್ತವೆ. ಸರಿಯಾಗಿ ಚಾಲನೆಯ ಹಿಡಿತ ಸಿಗುವ ತನಕ ಮೈದಾನ ಅಥವಾ ಸುರಕ್ಷಿತ ರಸ್ತೆಯ ಹೊರತಾಗಿ ಜನನಿಬಿಡ ಪ್ರದೇಶಕ್ಕೆ ಹೋಗಬಾರದು.
ಆದರೆ ಇಲ್ಲೊಬ್ಬ ಬಾಲಕಿ ಕಾರುನ್ನು ಪಾರ್ಕಿಂಗ್ ಮಾಡಿದ್ದ ಬೈಕ್ ಗಳ ಮೇಲೆ ಹತ್ತಿಸಿ ಅನಾಹುತ ಸೃಷ್ಟಿಸಿದ್ದಾಳೆ. ಕಾನ್ಪುರದಲ್ಲಿ ನಡೆದ ಘಟನೆ ಇದು. ಇಲ್ಲೊಬ್ಬಳು ಯುವತಿ ಕಾರನ್ನು ಚಲಾಯಿಸಲು ಹೋಗಿ ಪಾರ್ಕ್ ಮಾಡಿದ್ದ ಬೈಕ್, ಸ್ಕೂಟರ್ಗಳಿಗೆ ಡಿಕ್ಕಿ ಹೊಡೆದಿದ್ದಾಳೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾರೊಂದು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಮೇಲೆ ಹೋಗಿ ನಿಂತಿರುವುದು ಕಾಣಿಸುತ್ತದೆ. ಚಾಲಕಿ ಕಾರಿನಲ್ಲೇ ಇರುವುದನ್ನೂ ಇಲ್ಲಿ ಗಮನಿಸಬಹುದು. ಈ ಘಟನೆಯ ವೇಳೆ ಅಲ್ಲಿದ್ದ ಜನರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಇದು ಈಗ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.