ನ್ಯೂಸ್ ನಾಟೌಟ್ : ಅಪ್ರಾಪ್ತ ವಯಸ್ಸಿನ ತನ್ನ ತಂಗಿಯ ಮುಟ್ಟಿನ ರಕ್ತವನ್ನು ಲೈಂಗಿಕ ಸಂಭೋಗದ ಪರಿಣಾಮ ಎಂದು ಆಕೆಯ ಸಹೋದರ ತಪ್ಪಾಗಿ ಭಾವಿಸಿದ ಪರಿಣಾಮ, ದಿನಗಟ್ಟಲೆ ಚಿತ್ರಹಿಂಸೆ ನೀಡಿ ಅಣ್ಣನಿಂದ ಮಂಗಳವಾರ ಆಕೆ ಕೊಲೆಯಾಗಿದ್ದಾಳೆ. ಮಹಾರಾಷ್ಟ್ರದ ಉಲ್ಹಾಸ್ನಗರದ 12 ವರ್ಷದ ಬಾಲಕಿಯನ್ನು ತನ್ನ 30 ವರ್ಷದ ಸಹೋದರನಿಂದ ಹಿಂಸೆ ಅನುಭವಿಸಿದ್ದಾಳೆ ಎನ್ನಲಾಗಿದೆ.
ಹುಡುಗಿಯ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ತಪ್ಪಾಗಿ ತಿಳಿದ ಸಹೋದರ, ತನ್ನ ಸಹೋದರಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆಕೆಯನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾನೆ.
ಹುಡುಗಿಯ ಪೋಷಕರು ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಆ 12 ವರ್ಷದ ಹುಡುಗಿ ಪೇಟೆಯ ತನ್ನ ಅಣ್ಣನ ಮನೆಯಲ್ಲಿ ಆತನ ಹೆಂಡತಿಯೊಂದಿಗೆ ಇದ್ದಳು ಎನ್ನಲಾಗಿದೆ. ಸಹೋದರ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದನು,
ಅಪ್ರಾಪ್ತಳನ್ನು ಮೂರು ದಿನಗಳ ಕಾಲ ನಿರಂತರವಾಗಿ ಒದೆಯಗಿದೆ ಮತ್ತು ಮೈ ಮೇಲೆ ಗುದ್ದಿ ಹಲ್ಲೆ ನಡೆಸಲಾಗಿತ್ತು. ವಿಷಯ ತಿಳಿದ ಮೇಲೆ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಮಹರಾಷ್ಟ್ರದ ಉಲ್ಲಾಸ್ ನಗರ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿನ ವೈದ್ಯರು ಬಾಲಕಿಯನ್ನು ಪರೀಕ್ಷಿಸಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.
ನಂತರ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಲಕಿಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೋಸ್ಟ್ಮಾರ್ಟಮ್ ವರದಿಯಲ್ಲಿ ಬಾಲಕಿಯ ಮುಖ, ಕುತ್ತಿಗೆ ಮತ್ತು ಬೆನ್ನಿನ ಮೇಲೆ ಚಿತ್ರಹಿಂಸೆಯ ಗುರುತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.