ಮುಂಬೈ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವ್ಯವಹಾರಗಳಿಗೂ ಇಂಟರ್ ನೆಟ್ ಬೇಕೆ ಬೇಕು.ಅದು ರಾತ್ರಿ ಸಮಯದಲ್ಲಿ ಇಂಟರ್ ನೆಟ್ ಬಳಕೆ ಮಾಡುವ ಗ್ರಾಹಕರ ಸಂಖ್ಯೆ ಅಧಿಕವಾಗಿರುತ್ತದೆ. ನಿನ್ನೆ ರಾತ್ರಿ ಸರಿ ಸುಮಾರು 9 ಗಂಟೆಯಿಂದ ಮಧ್ಯರಾತ್ರಿ 3.30ರ ವರೆಗೆ ಇಂಟರ್ ನೆಟ್ ಸಮಸ್ಯೆಯಿಂದ ಇಡೀ ವಿಶ್ವವೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲವು ವ್ಯವಹಾರಗಳಿಗೆ ಅಡಚಣೆಯನ್ನುಂಟು ಮಾಡಿದ್ದ ಇಂಟರ್ ನೆಟ್ ನಿಂದ ನಷ್ಟ ಸಂಭವಿದ್ದು ಎಷ್ಟು ಗೊತ್ತಾ? ಬರೋಬ್ಬರಿ 44,743 ಕೋಟಿ ರೂ. ಅಂದರೆ ನೀವು ನಂಬಲೇ ಬೇಕು.
ಹೌದು, ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ , ಫೇಸ್ಬುಕ್, ಮೆಸೆಂಜರ್ ಎಲ್ಲವೂ ಏಕಾಏಕಿ ಸ್ಥಗಿತಗೊಂಡಿದ್ದು, ಕಂಪೆನಿ ಒಡೆಯ ಮಾರ್ಕ್ ಬರ್ಗ್ ಗೆ ಕೇವಲ 6 ಗಂಟೆಗಳಲ್ಲಿ 44,743 ಕೋಟಿ ರೂ. ನಷ್ಟ ಸಂಭವಿಸಿದೆ.ಸಾಮಾಜಿಕ ಜಾಲತಾಣದ ಏಕಾಏಕಿ ಸ್ಥಗಿತದ ಕಾರಣ ತಿಳಿಯದ ಪರಿಣಾಮ ಗ್ರಾಹಕರು ಒದ್ದಾಡುವಂತಾಯಿತು. ಮೊದಲು ತಾಂತ್ರಿಕ ದೋಷದ ಬಗ್ಗೆ ಅರಿವನ್ನು ಹೊಂದಿರದ ಗ್ರಾಹಕರು ಇದ್ಯಾಕೆ ಮೆಸೆಜ್ ಸೆಂಡ್ ಆಗ್ತಿಲ್ಲ, ಫೇಸ್ ಬುಕ್ ಯಾಕೆ ಓಪನ್ ಆಗ್ತಿಲ್ಲ ಏನೋ ತಾಂತ್ರಿಕ ದೋಷವಿದ್ದು 10 ನಿಮಿಷದಲ್ಲಿ ಸರಿಹೋಗಬಹುದು ಎಂದೇ ಭಾವಿಸಿದ್ದರು. ಈ ಬಗ್ಗೆ ಮಾತನಾಡಿದ ಫೇಸ್ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ , ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ಸರ್ವರ್ ಡೌನ್ನಿಂದಾಗಿ ಸಾಕಷ್ಟು ಮಂದಿ ಅಡಚಣೆ ಅನುಭವಿಸಿದ್ದು, ತೊಂದರೆ ಎದುರಿಸಿದ್ದಕ್ಕಾಗಿ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸಾಪ್ ಬಳಕೆದಾರರು, 41 ಕೋಟಿ ಫೇಸ್ಬುಕ್ ಬಳಕೆದಾರರು ಮತ್ತು 21 ಕೋಟಿ ಇನ್ಸ್ಟಾಗ್ರಾಮ್ ಬಳಕೆದಾರರು ಇದ್ದಾರೆ. ಇವರಲ್ಲಿ ಶೇ.90ಕ್ಕಿಂತ ಹೆಚ್ಚು ಮಂದಿ ಈ ಸಮಸ್ಯೆ ಎದುರಿಸಿದ್ದಾರೆ. . ತಾಂತ್ರಿಕ ದೋಷ ಕಾರಣ ಎಂದು ವಿವರಣೆ ನೀಡಲಾಗಿದ್ದು, ಜುಕರ್ ಬರ್ಗ್ ಬಳಕೆದಾರರ ಜತೆ ಕ್ಷಮೆ ಕೋರಿದ್ದಾರೆ.