ನ್ಯೂಸ್ನಾಟೌಟ್: ಸರ್ಬಿಯಾದ ರಾಜಧಾನಿ ಬೆಲ್ಗ್ರೇಡ್ನ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಶಾಲಾ ಸಿಬ್ಬಂದಿ ಸೇರಿದಂತೆ 8 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬುಧವಾರ ವರದಿ ತಿಳಿಸಿದೆ.
ಬೆಲ್ಗ್ರೇಡ್ನ ವ್ಲಾಡಿಸ್ಲಾವ್ ರಿಬ್ನಿಕರ್ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 8:40ರ ವೇಳೆಗೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದರೆ, ಇನ್ನೂ 6 ಮಕ್ಕಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ್ದ 7ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ ರಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಬಾಲಕ ತನ್ನ ತಂದೆಯ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡುತ್ತಿದ್ದು, ಪೊಲೀಸರು ಆರೋಪಿ ಬಾಲಕನ ತಲೆಯನ್ನು ಮುಚ್ಚಿ ಬಂದಿಸಿದ್ದಾರೆ. ಹಲವು ಮಕ್ಕಳ ಸಾವಿನ ಸುದ್ದಿ ಕೇಳುತ್ತಲೇ ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಹುಡುಕಿಕೊಂಡು ಶಾಲೆಗೆ ಧಾವಿಸಿದ್ದಾರೆ.
ಸರ್ಬಿಯಾದಲ್ಲಿ ಇಂತಹ ಸಾಮೂಹಿಕ ಗುಂಡಿನ ದಾಳಿಗಳು ತೀರಾ ವಿಚಿತ್ರ ಘಟನೆಯಾಗಿದ್ದು, ಆದರೂ 1990ರ ಯುದ್ಧದ ಬಳಿಕ ದೇಶದಲ್ಲಿ ಉಳಿದಿರುವ ಶಸ್ತ್ರಾಸ್ತ್ರಗಳ ಸಂಖ್ಯೆಯ ಬಗ್ಗೆ ತಜ್ಞರು ಪದೇ ಪದೇ ಎಚ್ಚರಿಸಿದ್ದಾರೆ. ಆರ್ಥಿಕ ಸಂಕಷ್ಟ ಹಾಗೂ ಇತರ ಘರ್ಷಣೆಗಳಿಂದಾಗಿ ಇಂತಹ ಘಟನೆಗಳಿಗೆ ಪ್ರಚೋದನೆ ಸಿಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.