ನ್ಯೂಸ್ ನಾಟೌಟ್ : ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಭರವಸೆ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ವಾದ ವಿವಾದದಲ್ಲಿ ತೊಡಗಿಸಿಕೊಂಡಿದ್ದರೆ ಇದೀಗ ಜೆಡಿಎಸ್ ಈ ಬಗ್ಗೆ ಮಾತೆತ್ತಿದೆ.ಕಾಂಗ್ರೆಸ್ ಪಕ್ಷವು ಬಜರಂಗ ದಳ ನಿಷೇಧ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದು, ಇದು ಪ್ರಣಾಳಿಕೆಯ ವಿಷಯವಾ ? ನಿಷೇಧ ಮಾಡುವುದು ಪರಿಹಾರವಾ ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಬಜರಂಗದಳ ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಮಾತನ್ನಾಡುತ್ತಿದ್ದಾರೆ.ಬಜರಂಗದಳ ನಿಷೇಧ ಮಾಡುವುದು ಪರಿಹಾರವಾ ? ಸಮಾಜದಲ್ಲಿ ಸುಮಧುರ ವಾತಾವರಣ ತರಬೇಕು. ಸಂಘಟನೆ ಬ್ಯಾನ್ ಮಾಡೋದು ಪರಿಹಾರವಲ್ಲ. ಅಲ್ಲಿ ಯಾರು ತಪ್ಪು ಮಾಡಿದ್ದಾರೆ, ಆ ಮೂಲವನ್ನು ಹಿಡಿಯಬೇಕು ಎಂದಿದ್ದಾರೆ.
ಇನ್ನು ಬಜರಂಗ ದಳದಲ್ಲಿ ಅಮಾಯಕ ಮಕ್ಕಳ ಉಪಯೋಗ ಮಾಡುತ್ತಾರೆ. ಮಕ್ಕಳಿಗೆ ಭಾವನಾತ್ಮಕ ವಿಷಯ ಮೆದುಳಿಗೆ ತುಂಬುವ ಕೆಲಸ ಮಾಡುತ್ತಾರೆ. ಅಂತಹ ಚಟುವಟಿಕೆ ಕಡಿಮೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಹಿಂದೆ ಇತ್ತಲ್ಲಾ ಆಗ ಏಕೆ ಮಾತನಾಡಲಿಲ್ಲ? ಎಂದುಪ್ರಶ್ನಿಸಿದ್ದಾರೆ.