ನ್ಯೂಸ್ ನಾಟೌಟ್ : ಸರ್ಕಾರಿ ಕಚೇರಿಗಳ ಕೆಲಸದ ಸಮಯದಲ್ಲಿ ಮಹತ್ವದ ಬದಲಾವಣೆ ನಡೆಸಿದ್ದು, ಇನ್ನು ಮುಂದೆ 9-5 ಗಂಟೆಯವರೆಗೆ ಇದ್ದ ಸಮಯದ ಬದಲಾಗಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡಬೇಕು ಎಂದು ಪಂಚಾಬ್ ಸರ್ಕಾರ ಆದೇಶ ಹೊರಡಿಸಿದೆ.
ಇದು ಕರ್ನಾಟಕದ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವುದಿಲ್ಲ, ಬದಲಾಗಿ ಈ ಆದೇಶ ಹೊರಡಿಸಿರುವುದು ಪಂಜಾಬ್ ಸರ್ಕಾರ ಎನ್ನಲಾಗಿದೆ. ಹೊಸ ವೇಳಾಪಟ್ಟಿಯಲ್ಲಿ, ಭಗವಂತ್ ಮಾನ್ ಸರ್ಕಾರವು ಅರ್ಧ ಗಂಟೆ ಊಟದ ವಿರಾಮವನ್ನು ತೆಗೆದುಹಾಕಿದ್ದು, ಇನ್ನೂ, ನೌಕರರು ಮೊದಲಿಗಿಂತ ಒಂದು ಗಂಟೆ ಕಡಿಮೆ ಕೆಲಸ ಮಾಡುತ್ತಾರೆ ಎಂದು ಸರ್ಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.
ಪಂಜಾಬ್ ಸರ್ಕಾರವು ವಿದ್ಯುತ್ ವೆಚ್ಚವನ್ನು ಉಳಿಸಲು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಉದ್ಯೋಗಿಗಳಿಗೆ ಹೊಸ ಕಚೇರಿ ಸಮಯವನ್ನು ಘೋಷಿಸಿದ್ದು, ಹೊಸ ಕೆಲಸದ ಅವಧಿಯು ಜುಲೈ 15 ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಇದರ ಪರಿಣಾಮವಾಗಿ ಅಂದಾಜು 40-42 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ನೌಕರರು, ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಹಿಡಿದು ಸೂಪರಿಂಟೆಂಡೆಂಟ್ಗಳು ಮತ್ತು ಪ್ಯೂನ್ಗಳವರೆಗೆ, ಪಂಜಾಬ್ನ ಹಲವು ಸ್ಥಳಗಳಲ್ಲಿ ಬೆಳಿಗ್ಗೆ 7:30 ರ ಗಡುವಿನ ಮೊದಲು ತಮ್ಮ ತಮ್ಮ ಕಚೇರಿಗಳಿಗೆ ಹೋಗುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.