ನ್ಯೂಸ್ ನಾಟೌಟ್: ಮೇ ೧೦ರಂದು ನಡೆಯಲಿರುವ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು,ಅದರಲ್ಲಿರುವ ಒಂದು ವಿಷಯದ ಕುರಿತಾಗಿ ಇದೀಗ ವ್ಯಾಪಕ ಟೀಕಾ ಪ್ರಹಾರಗಳು ನಡೆಯುತ್ತಿವೆ.ಬಜರಂಗದಳ ಬ್ಯಾನ್ ಭರವಸೆ ಬಿಜೆಪಿಗರನ್ನು,ಹಿಂದೂ ಮುಖಂಡರನ್ನು ತೀವ್ರ ಕೆರಳಿಸುವಂತೆ ಮಾಡಿದ್ದು,ಇದಕ್ಕೆ ಸಂಬಂಧ ಪಟ್ಟ ಹಾಗೆ ಕೆಂಡಾಮಂಡಲರಾಗಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ರಾಜಕೀಯ ವಲಯದಲ್ಲಿ ಹಲವು ಬೆಳವಣಿಗೆಗಳು ಆಗಿದ್ದು,ಬಜರಂಗದಳ ಕಾರ್ಯಕರ್ತರು ಅಲ್ಲಲ್ಲಿ ಪ್ರತಿಭಟನೆಗಿಳಿದಿದ್ದಾರೆ.ಬಜರಂಗದಳ ನಿಷೇಧ ಭರವಸೆಯನ್ನು ಹಿಂದಕ್ಕೆ ತೆಗೆದುಕೊಳ್ಳಿ ಇಲ್ಲವೇ ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ ನೋಡಿ ಎಂದು ಸವಾಲೆಸೆದಿದ್ದಾರೆ.ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ. ನಾವೂ ಆಂಜನೇಯ ಭಕ್ತರು. ಆದರೆ ಆಂಜನೇಯನಿಗೂ ಭಜರಂಗದಳ ಸಂಘಟನೆಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, “ಕೇವಲ ಅವರು ಮಾತ್ರವಲ್ಲ, ನಾವು ಕೂಡಾ ಅಂಜನೇಯಾ ಭಕ್ತರು. ಶಾಂತಿ ತೋಟ ಎಂದಿಗೂ ಕದಲಬಾರದು. ಬಿಜೆಪಿ ಎತ್ತಿಕಟ್ಟುತ್ತಿದ್ದು, ಇದು ಜನಕ್ಕೂ ಅರ್ಥ ಅಗಿದೆ ಆಂಜನೇಯ ಬೇರೆ ಭಜರಂಗದಳ ಬೇರೆ” ಎಂದಿದ್ದಾರೆ.
ಮೇ.4ರಂದು ಹನುಮ ಚಾಲಿಸ ಪಠಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ಹನುಮ ಚಾಲಿಸ’ ನಾವು ದಿನಾ ಮಾಡ್ತೀವಿ. ಅವರೊಬ್ಬರೇನಾ ಮಾಡೋದು. ಹಿಂದೆ ಇದ್ದ ಆರೆಸ್ಸೆಸ್ ಬೇರೆ, ಆದರೆ ಈಗಿನ ಆರೆಸ್ಸೆಸ್ ಬೇರೆ ಎಂದಿದ್ದಾರೆ.ಬಿಜೆಪಿ ಅವರು ಒಂದೊಂದು ವಿಷಯ ತೆಗೆದುಕೊಂಡು ಹೀಗೆ ಮಾಡ್ತಿದ್ದಾರೆ. ಇದೆಲ್ಲ ಈ ಬಾರಿಯ ಚುನಾವಣೆಯಲ್ಲಿ ನಡೆಯೋದಿಲ್ಲ. ನಾನು ಹಿಂದೂ, ನಾನು ಆಂಜನೇಯ ಭಕ್ತ, ರಾಮನ ಭಕ್ತ. ನಮಗೆ 141 ಸೀಟು ಬರೋದು ಪಕ್ಕಾ ಇದು ಮೇ.13 ರಂದು ಫಲಿತಾಂಶದ ವೇಳೇ ಸ್ಪಷ್ಟವಾಗುತ್ತೆ ಎಂದು ಹೇಳಿದ್ದಾರೆ.