ನ್ಯೂಸ್ ನಾಟೌಟ್ : ಕಾರ್ಕಳದ ಅಭಿವೃದ್ಧಿ ವಿಚಾರದಲ್ಲಿ ಸ್ವಚ್ಛ ಕಾರ್ಕಳ ಅಭಿಯಾನ ಕೂಡ ಒಂದು. ಮಹಾತ್ಮಗಾಂಧೀಜಿ 150ನೇ ಜನ್ಮ ದಿನದ ಪ್ರಯುಕ್ತ ಪ್ರಧಾನಿ ಮೋದಿ ಸ್ವಚ್ಛ ಭಾರತ್ ಪ್ರೇರಣೆಯಿಂದ “ಗಾಂಧೀಜಿ 150- ಸ್ವಚ್ಛತೆಗೆ ಸ್ವಲ್ಪ ಹೊತ್ತು ಕಾರ್ಯಕ್ರಮವನ್ನು ಮಾಡಲಾಗಿದೆ. ನಿರಂತರ ಮೂರು ವರ್ಷಗಳಿಂದ ಅಭಿಯಾನದ ರೂಪದಲ್ಲಿ ಸಾವಿರಾರು ಕಾರ್ಯಕರ್ತರ ಸಹಕಾರದಿಂದ ನಡೆಯುತ್ತಿದೆ.
ಪ್ರತಿ ಭಾನುವಾರ ಯುವಕರ ತಂಡವೊಂದು ಸ್ವಚ್ಛತೆಯ ಕಾರ್ಯದಲ್ಲಿ ಪಾಲ್ಗೊಂಡು ನಗರವನ್ನು ಕ್ಲೀನ್ ಸಿಟಿ ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಶಾಸಕ ಸುನಿಲ್ ಕುಮಾರ್ ಅವರು ಕೂಡ ಇದರಲ್ಲಿ ಪಾಲ್ಗೊಂಡು ಯುವಕರನ್ನು ಹುರಿದುಂಬಿಸುವ ಕೆಲಸವನ್ನು ಮಾಡುತ್ತಿರುವುದು ವಿಶೇಷ.
10 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಾಣ:
ಹೆಬ್ರಿಯಲ್ಲಿ ಸುಸಜ್ಜಿತವಾದ ತಾಲೂಕು ಆಡಳಿತ ಸೌಧವನ್ನು ನಿರ್ಮಾಣ ಮಾಡಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಆಡಳಿತ ಸೌಧದಲ್ಲಿ ಒಂದೇ ಕಡೆ ಎಲ್ಲ ಸೌಲಭ್ಯವನ್ನು ಒದಗಿಸುವುದು ಇಲ್ಲಿನ ಪ್ರಮುಖ ಉದ್ದೇಶವಾಗಿದೆ. ಕಾರ್ಕಳದ ಅಭಿವೃದ್ಧಿಯಲ್ಲಿ ಇದು ಕೂಡ ಒಂದು ಅನ್ನುವುದು ವಿಶೇಷ.