ನ್ಯೂಸ್ ನಾಟೌಟ್: ಅವಿವಾಹಿತ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರಿಗೆ ಅಪಖ್ಯಾತಿ ತರುವ ಉದ್ದೇಶದಿಂದ ನಕಲಿ ‘ನಿಕಾಹ್ನಾಮ’ ಅಂದರೆ ಮದುವೆ ದೃಢೀಕರಣ ಪತ್ರ ಸಿದ್ಧಪಡಿಸಿದ ಆರೋಪದ ಮೇಲೆ ಪುಣೆ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಮಂಗಳವಾರ ಬಂಧಿಸಿದ್ದಾರೆ.
ಆರೋಪಿಯನ್ನು ಬುಲ್ದಾನ ನಿವಾಸಿ ಶೇಖ್ ಖಲೀಲ್ ಶೇಖ್ ಜಮೀಲ್ (30) ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
2022ರ ಜುಲೈನಲ್ಲಿ ಚಂದನ್ ನಗರ ಪೊಲೀಸ್ ಠಾಣೆಯಲ್ಲಿ 23 ವರ್ಷದ ಮಹಿಳೆ ಈ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಖಾರಾಡಿ ನಿವಾಸಿ ದೂರುದಾರರು ಅವಿವಾಹಿತೆಯಾಗಿದ್ದರೂ ನಕಲಿ ದಾಖಲೆಗಳನ್ನು ಆವರ ಮೇಲೆ ಸೃಷ್ಟಿಸಲಾಗಿದೆ. ಕೆಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಆಕೆಯ ಮದುವೆ ಆಗಿದ್ದಾಳೆ ಎಂದು ಪೋಸ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಕೃತ್ಯ ಎಸಗಿದ ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಇಮ್ರಾನ್ ಶೇಖ್ ಮತ್ತು ಶೇಖ್ ಖಲೀಲ್ ಶೇಖ್ ಜಮೀಲ್ ಎಂಬ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳು ಇಮ್ರಾನ್ ಜೊತೆಗಿನ ಮಹಿಳೆಯ ನಕಲಿ ವಿವಾಹ ಛಾಯಾಚಿತ್ರ, ನಕಲಿ ವಿವಾಹ ಪ್ರಮಾಣಪತ್ರದಂತಹ ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಮವಾರ ಪೊಲೀಸರು ಹೊರಡಿಸಿದ ಹೇಳಿಕೆಯಲ್ಲಿ ಇಮ್ರಾನ್ನನ್ನು ಮೊದಲೇ ಬಂಧಿಸಲಾಗಿತ್ತು, ಆದರೆ ಜಮೀಲ್ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆದಿದೆ ಎನ್ನಲಾಗಿದೆ. ಇದರ ಹಿಂದಿನ ನಿಖರ ಕಾರಣ ತನಿಖೆಯ ನಂತರ ತಿಳಿಯಬೇಕಿದೆ. ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 467, 468, 471, 500 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.