ನ್ಯೂಸ್ ನಾಟೌಟ್ : ‘ಈ ವರೆಗೆ ಬಹಳ ಧೈರ್ಯಶಾಲಿ ಕ್ರಮವನ್ನು ಪ್ರಧಾನಿ ಮೋದಿ ತೆಗೆದುಕೊಂಡಿದ್ದಾರೆ ಅದಕ್ಕೆ ಕಾರಣ ಮತದಾರರು. ಮುಂದೆ ಇಂತಹ ಕ್ರಮದ ಅವಶ್ಯಕತೆ ಇದೆ. ಇದಕ್ಕೆ ರಾಜ್ಯದಲ್ಲಿ 130 ಕ್ಕೂ ಅಧಿಕ ಸೀಟ್ ಪಡೆದು ಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಿಜೆಪಿಯ ಭದ್ರ ಬುನಾದಿ ಇರುವ ಪುತ್ತೂರಿನಲ್ಲಿ ಬಿಜೆಪಿ ಗೆಲ್ಲಬೇಕು’ ಎಂದು ಕರ್ನಾಟಕ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು ಬಂಡಾಯ ಮತ್ತು ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಕರಾವಳಿಯಲ್ಲಿ ಬಿಜೆಪಿ ಭದ್ರ ಬುನಾದಿ ಇರುವ ಕಾರಣ ಪಕ್ಷೇತರರು ಬಿಜೆಪಿಯಲ್ಲಿ ಟಿಕೆಟ್ ಕೊಡಬೇಕೆಂದು ಕೇಳುವುದು ಸಹಜ. ಬಿಜೆಪಿ ಪ್ರಜಾಪ್ರಭುತ್ವ ಪಕ್ಷ ಆದ್ದರಿಂದ ಇದು ತಪ್ಪು ಎನ್ನಲಾಗುವುದಿಲ್ಲ. ಆದರೆ ಮತದಾರರು ಆಲೋಚಿಸಬೇಕು. ಅದೆಷ್ಟೋ ಕಾರ್ಯಕರ್ತರು ಪಕ್ಷಕ್ಕಾಗಿ ಪ್ರಾಣ ನೀಡಿದ್ದಾರೆ. ನಾಯಕರು ಶ್ರಮ ವಹಿಸಿದ್ದಾರೆ. ಶಾಸಕ ಸಂಜೀವ ಮಠಂದೂರು ಅಂತಹ ಶಾಸಕರು ಬಹಳ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದು ವ್ಯರ್ಥ ವಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು ಎನ್ನಲಾಗಿದೆ.
ಅಭ್ಯರ್ಥಿ ಆಶಾ ತಿಮ್ಮಪ್ಪ, ಶಾಸಕ ಸಂಜೀವ ಮಠಂದೂರು, ಸಾಜ ರಾಧಾಕೃಷ್ಣ ಆಳ್ವ, ಪಿ. ಜಿ ಜಗನನಿವಾಸ್ ರಾವ್, ಬಿಂದು ಸುರೇಶ, ವಕೀಲರಾದ ಸುರೇಶ್, ಅಪ್ಪಯ್ಯ ಮನಿಯಾಣಿ, ಗೋಪಾಲಕೃಷ್ಣ ಹೇರಳೆ, ಬೂಡಿಯಾರ್ ರಾಧಾಕೃಷ್ಣ ರೈ, ಆರ್. ಸಿ ನಾರಾಯಣ್, ಚಂದ್ರಶೇಖರ ರಾವ್ ಬಪ್ಪಲಿಗೆ ಮೊದಲಾದವರು ಉಪಸ್ಥಿತರಿದ್ದರು.