ನ್ಯೂಸ್ ನಾಟೌಟ್ : ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.ಇದರ ಬೆನ್ನಲ್ಲೇ ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಮಾನಕರ ಹೇಳಿಕೆ ದೇಶಕ್ಕೆ ತೋರಿದ ಅವಮಾನವೆಂದು ಆಕ್ರೋಶ ವ್ಯಕ್ತ ವ್ಯಕ್ತಪಡಿಸಿದ್ದಾರೆ.
ಕಾರ್ಕಳದ ವಿಕಾಸಕ ಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ರಾಜಕಾರಣಕೋಸ್ಕರ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ನೀಡಿರುವ ಅವಮಾನಕರ ಹೇಳಿಕೆಯನ್ನು ಸಮಾಜವು ಎಂದೂ ಸಹಿಸಲಾರದು. ಈ ಹಿಂದೆಯೂ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ,ಸಿದ್ಧರಾಮಯ್ಯ ಇವರು ಪದೇ ಪದೇ ಅವಮಾನಕಾರ ಹೇಳಿಕೆ ನೀಡಿದ್ದರು. ಇದು ಖಂಡನಾರ್ಹವಾಗಿದೆ ಎಂದು ಕಿಡಿಕಾರಿದರು.
ಖರ್ಗೆ ಗಾಂಧಿ ಕುಟುಂಬದ ರಾಜಕೀಯ ಓಲೈಕೆಗಾಗಿ ಪ್ರಧಾನಿಯನ್ನು ದೂಷಿಸಿದ್ದಾರೆ. ಇದನ್ನು ಖಂಡಿಸಿದ ಸಚಿವ ವಿ.ಸುನಿಲ್ ಕುಮಾರ್ , ರಾಜ್ಯದ ಮತದಾರರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಸಿದ್ಧರಾಮಯ್ಯನವರಿಗೂ ಮೊದಲಿನಿಂದಲೇ ಕುಂಕುಮ ವೆಂದರೆ ತುಂಬಾ ಅಲರ್ಜಿ.ರಾಜ್ಯದ ಮತದಾರರು ಎಚ್ಚರಿಕೆ ವಹಿಸಿಕೊಳ್ಳುವ ಕಾಲ ಕೂಡಿ ಬಂದಿದೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ವರ್ತನೆಯನ್ನು ಖಂಡಿಸಿದರು.ನರೇಂದ್ರ ಮೋದಿ ಜಗತ್ತಿನ ಸರ್ವ ಶ್ರೇಷ್ಠ ನಾಯಕ. ತಮ್ಮ ಆಡಳಿತ ವೈಖರಿ ಮೂಲಕ ದೇಶದ ಜನರ ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದವರು ಅವರು. ತಮ್ಮ ರಾಜಕಾರಣಗೋಸ್ಕರ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆಯನ್ನು ಸಮಾಜ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸುನಿಲ್ ಕುಮಾರ್ ಹೇಳಿದರು.