ನ್ಯೂಸ್ ನಾಟೌಟ್: ಕರಾವಳಿ ಅಂದ್ರೆ ಯಕ್ಷಗಾನ ಕಲೆಯ ನೆಲೆವೀಡು. ಇಲ್ಲಿ ಕಲೆ ಸಂಸ್ಕೃತಿ ಆಚಾರ ವಿಚಾರ ವಿಭಿನ್ನ. ಇಂತಹ ಪ್ರದೇಶದಲ್ಲಿ ಹೆಚ್ಚಿನ ಜನರು ಯಕ್ಷಗಾನದ ಅಭಿಮಾನಿಗಳು ಅನ್ನುವುದು ವಿಶೇಷ. ಕರಾವಳಿಯ ಗಂಡು ಕಲೆ ಯಕ್ಷಗಾನದ ಸಂರಕ್ಷಣೆಗಾಗಿ ಇದೇ ಮೊದಲ ಬಾರಿಗೆ ಯಕ್ಷ ರಂಗಾಯಣವನ್ನು ವಿ ಸುನಿಲ್ ಕುಮಾರ್ ಆಡಳಿತ ಅವಧಿಯಲ್ಲಿ ಮಾಡಿರುವುದು ಬಹು ದೊಡ್ಡ ಸಾಧನೆಯಾಗಿದೆ.
ಹೌದು, ಇವರು ಹಲವಾರು ವೃತ್ತಿಪರ ನಾಟಕ ತಂಡಗಳಿಗೆ ಅಪೂರ್ವ ಅವಕಾಶ ನೀಡಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಿದ್ದಾರೆ. ಕಲಾಸಕ್ತ ಯುವ ಜನರಿಗೆ ಪ್ರೇರಣೆಯನ್ನು ನೀಡಲಾಗಿದೆ. ಕಲಾ ಪ್ರದರ್ಶನ ತರಬೇತಿಗೆ ಕನ್ನಡ ಮತ್ತು ಸಂಸ್ಕೃತಿಯ ಬೆಂಬಲವನ್ನು ನೀಡಲಾಗಿದೆ. ಇದೆಲ್ಲವೂ ವಿ ಸುನಿಲ್ ಕುಮಾರ್ ಆಡಳಿತ ಅವಧಿಯಲ್ಲಿ ಆಗಿರುವ ಬಹು ದೊಡ್ಡ ಬದಲಾವಣೆಯಾಗಿದೆ.