ನ್ಯೂಸ್ ನಾಟೌಟ್: ತೆಲಂಗಾಣದ ಬಿಆರ್ಎಸ್ ಪಕ್ಷದ ಶಾಸಕ ದುರ್ಗಮ್ ಚಿನ್ನಯ್ಯ ಇತ್ತಿಚೆಗೆ ತಾನು ಆಗಮಿಸುತ್ತಿದ್ದ ವೇಳೆ ಟೋಲ್ ಗೇಟ್ ತೆರೆಯಲಿಲ್ಲ ಎಂದು ಕಾರಿನಿಂದ ಇಳಿದು ಸಿಬ್ಬಂದಿಗೆ ಹಲ್ಲೆ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು, ಈಗ ಅದೇ ಶಾಸಕ ಮತ್ತೊಂದು ವಿಷಯ ವೈರಲ್ ಆಗಿದೆ.
ಮಂಚಿರ್ಯಾಲ ಜಿಲ್ಲೆ ಬೆಲ್ಲಂಪಲ್ಲಿ ಶಾಸಕ ದುರ್ಗಂ ಚಿನ್ನಯ್ಯ ಅವರನ್ನು ಹಣಕ್ಕಾಗಿ ಬೆದರಿಸಿರುವ ಘಟನೆ ಗುರುವಾರ ನಡೆದಿದೆ. ಕಾಮರೆಡ್ಡಿ ಜಿಲ್ಲೆ ಎಲ್ಲಾರೆಡ್ಡಿ ಮಂಡಲ ಅಜಮಾಬಾದ್ಗೆ ಸೇರಿದ ಎಂಡಿ ಇಶಕ್ ಎಂಬ ವ್ಯಕ್ತಿ ಈ ತಿಂಗಳ 23 ರಂದು ಬೆಲ್ಲಂಪಲ್ಲಿ ಶಾಸಕಗೆ ಹುಡುಗಿಯ ಹೆಸರಿನಲ್ಲಿ ವಾಟ್ಸಪ್ ಸಂದೇಶಗಳನ್ನು ಬಂದಿವೆ.
ಈ ವೇಳೆ ಶಾಸಕನು ನೈಜತೆ ತಿಳಿಯದೆ ಮೋಸದ ಜಾಲಕ್ಕೆ ಬಿದ್ದು ಅಸಭ್ಯ ಚಾಟಿಂಗ್ ನಲ್ಲಿ ತೊಡಗಿದ್ದಾರೆ. ಆದರೆ ಆಡೆಯ ವ್ಯಕ್ತಿ ಯುವತಿಯಂತೆ ಚಾಟಿಂಗ್ ಮಾಡಿ ಖಾಸಗಿ ಫೋಟೋ ಮಾಹಿತಿಗಳು ದೊರೆತ ಮೇಲೆ ಆ ಕಡೆಯಿಂದ ತನಗೆ 90 ಸಾವಿರ ರೂಪಾಯಿ ಕೊಡಬೇಕು ಇಲ್ಲವಾದರೆ ಈ ಮಾಹಿತಿ ಮತ್ತು ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಕೊನೆಗೆ ಅದು ಹುಡುಗಿ ಅಲ್ಲ ಹುಡುಗ ಎಂದು ತನಿಖೆಯಲ್ಲಿ ಬಯಲಾಗಿದೆ.