ನ್ಯೂಸ್ ನಾಟೌಟ್: ವಿ ಸುನಿಲ್ ಕುಮಾರ್ ಕಾರ್ಕಳದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನಂತರ ಕಾರ್ಕಳದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದೆ. ಅಂತಹ ಅಭಿವೃದ್ಧಿ ಕೆಲಸಗಳಲ್ಲಿ ಕಾರ್ಕಳ ನಗರಕ್ಕೆ ಹತ್ತಿರವಿರುವ ಸಾಣೂರು ಮಠದ ಕೆರೆ ಏರಿ ಕೂಡ ಒಂದು ಅನ್ನುವುದು ವಿಶೇಷ.
ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸಾಣೂರು ಮಠದ ಕೆರೆಯು ಕಾರ್ಕಳ ನಗರ ಪ್ರದೇಶಕ್ಕೆ ಹತ್ತಿರದಲ್ಲಿದೆ. ಈ ಪುರಾತನ ಕೆರೆಯು ಐತಿಹಾಸಿಕ ಹಾಗೂ ಪುರಾತನ ಕೆರೆಯಾಗಿದೆ. ಕೆರೆಯ ಪಕ್ಕದಲ್ಲಿ ಪುರಾತನ ಬಸವೇಶ್ವರ ಮಠವಿದೆ. ಇದು ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿದೆ. ಈ ಕೆರೆಯು ಬರೋಬ್ಬರಿ ೮.೬೦ ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿನ ಕರೆ ಏರಿಯನ್ನು ಎತ್ತರಿಸಿ ಗ್ರಾನೈಟ್ ಪಿಚ್ಚಿಂಗ್ ಅನ್ನು ನಿರ್ಮಿಸಲಾಗಿದೆ. ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ. ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ. ಕೆರೆಯ ನೀರಿನ ಹರಿಯುವಿಕೆಯು ನಿಯಂತ್ರಣವನ್ನು ಮಾಡಲಾಗಿದೆ. ಹೆಡ್ವಾಲ್ ಹಾಗೂ ಗೇಟ್ ನಿರ್ಮಾಣ ಮಾಡಲಾಗಿದೆ. ಕೆರೆಗೆ ಇಳಿಯಲು ಮೆಟ್ಟಿಲು ನಿರ್ಮಾಣ , ಕ್ರೀಡಾ ಚಟುವಟಿಕೆಗೆ ಕ್ರೀಡಾಂಗಣ ಹಾಗೂ ಸಂಗೀತ ಕಾರಂಜಿಯನ್ನು ನಿರ್ಮಿಸಿರುವುದು ವಿಶೇಷವಾಗಿದೆ.