ನ್ಯೂಸ್ ನಾಟೌಟ್: ಸುಳ್ಯಕ್ಕೆ ಇದೇ ಮೊದಲ ಸಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿತು, ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರದ ಬಗ್ಗೆ ಮಾತನಾಡುತ್ತಿರುವಾಗಲೇ ಮಳೆ ಬರುವುದಕ್ಕೆ ಶುರುವಾಗಿದ್ದರಿಂದ ಖರ್ಗೆಯವರು ಇದು ಶುಭ ಸೂಚನೆ ಗೆಲುವು ನಮ್ಮದೇ ಎಂದು ಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಜೋರಾಗಿ ಕರತಾಡನ ನಡೆಸಿ ಹರ್ಷ ವ್ಯಕ್ತಪಡಿಸಿದರು.
ಕಳೆದ ಕೆಲವು ದಿನಗಳಿಂದ ಬೇಸಿಗೆ ಬಿರು ಬಿಸಿಲಿಗೆ ಸಿಲುಕಿ ಕರಾವಳಿ ಜನ ತತ್ತರಿಸಿದ್ದರು. ಸುಳ್ಯ, ಪುತ್ತೂರು, ಮಂಗಳೂರಿನಲ್ಲಿ ಬಿಸಿಲಿನ ಧಗೆ ವಿಪರೀತ ಮಟ್ಟಕ್ಕೆ ಏರಿತ್ತು. ಇದೀಗ ಸುಳ್ಯದ ಮಟ್ಟಿಗೆ ನೋಡುವುದಾದರೆ ಜನ ಸ್ವಲ್ಪ ನಿಟ್ಟಿಸಿರುವ ಬಿಡುವ ಸ್ಥಿತಿ ನಿರ್ಮಾಣವಾಗಿದೆ.ಮಂಗಳವಾರ ಮಧ್ಯಾಹ್ನ ಸುಳ್ಯದಲ್ಲಿ ವರುಣರಾಯ ಸುರಿಯಲಾರಂಭಿಸಿದ. ಇದರಿಂದ ಬಿಸಿಯಿಂದ ಕುದಿಯುತ್ತಿದ್ದ ಸುಳ್ಯ ನಗರ ಸಣ್ಣಗೆ ತಂಪಾಯಿತು. ಬೇಸಿಗೆ ಬಿಸಿ ತಾಪ ಹೆಚ್ಚಿರುವುದರಿಂದ ಜೀವನದಿ ಪಯಸ್ವಿನಿ ಭತ್ತಿ ಹೋಗಿದೆ. ಇದರಿಂದ ಸುಳ್ಯ ನಗರ ಪಂಚಾಯತ್ ಜನರಿಗೆ ನೀರು ಪೂರೈಸುವುದಕ್ಕೆ ಒದ್ದಾಟ ನಡೆಸುತ್ತಿದೆ. ಹಲವಾರು ಜಲಚರಗಳು ಸಾವಿಗೀಡಾಗಿವೆ. ಈ ಬೆನ್ನಲ್ಲೇ ಮಳೆ ಬಂದಿರುವುದಿರಿಂದ ಸಣ್ಣ ಮಟ್ಟಿನ ಭರವಸೆ ಮೂಡಿದಂತಾಗಿದೆ.