ನ್ಯೂಸ್ ನಾಟೌಟ್: ಕಾರ್ಕಳದ ಅಭಿವೃದ್ಧಿಯು ಒಂದೊಂದೇ ಕಥೆಗಳನ್ನು ಸಾರುತ್ತಿದೆ. ಸಚಿವ ಎಸ್ ಸುನಿಲ್ ಕುಮಾರ್ ಆಡಳಿತದಲ್ಲಿ ಕಾರ್ಕಳ ಸ್ವರ್ಣ ಕಾರ್ಕಳವಾಗಿ ಬದಲಾಗಿದೆ. ಸಮಸ್ತ ಮೂಲಭೂತ ವ್ಯವಸ್ಥೆಯು ಅಭಿವೃದ್ಧಿಯನ್ನು ಕಂಡಿದೆ. ಶೈಕ್ಷಣಿಕ , ಕಲೆ, ಸಂಸ್ಕೃತಿ ವಿಚಾರದಲ್ಲಿ ಕಾರ್ಕಳ ತನ್ನದೇ ಆದ ದೂರದೃಷ್ಟಿಯನ್ನು ಕಂಡಿದೆ. ಇದೀಗ ಆ ಸಾಲಿಗೆ ಸಾರ್ವಜನಿಕ ಗ್ರಂಥಾಲಯ ಕೂಡ ಸೇರಿಕೊಂಡಿದೆ ಅನ್ನುವುದು ವಿಶೇಷ.
ಕಾರ್ಕಳದ ಗಾಂಧಿ ಮೈದಾನದ ಬಳಿ ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಸುಸಜ್ಜಿತ ಗ್ರಂಥಾಲಯದ, ಪುಸ್ತಕ ಪ್ರಿಯರ ನೆಚ್ಚಿನ ತಾಣವಾಗಿದೆ. ಡಿಜಿಟಲೀಕರಣ ಗ್ರಂಥಾಲಯ ಇದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಅಧ್ಯಯನ ಕೇಂದ್ರ ಇದಾಗಿದೆ. ಇಲ್ಲಿನ ಗ್ರಂಥಾಲಯವನ್ನು ಸಾರ್ವಜನಿಕರು ತಮ್ಮ ಓದುವ ಹವ್ಯಾಸಕ್ಕೆ ಬಳಸಬಹುದಾಗಿದೆ. ಊರಿನ ವಿದ್ಯಾರ್ಥಿಗಳು, ಪುಸ್ತಕಾಸ್ತಕರು ಈ ಗ್ರಂಥಾಲಯಕ್ಕೆ ಬಂದು ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.