ನ್ಯೂಸ್‌ನಾಟೌಟ್: ಬೆಂಗಳೂರಿನಲ್ಲಿ ಬೈಕ್‌ಗೆ ಕಾರಿ ಡಿಕ್ಕಿಯಾಗಿ ಸೋಮವಾರ ಕೊಲ್ಲಮೊಗ್ರದ ಯುವಕ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಕೊಲ್ಲಮೊಗ್ರದ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷೀ ದಂಪತಿಯ ಪುತ್ರ ಯತೀಶ್ (30 ) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯತೀಶ್ ಅವವರನ್ನುಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಯತೀಶ್ ಅವಿವಾಹಿತರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು.