ನ್ಯೂಸ್ ನಾಟೌಟ್ :ಧರ್ಮಸ್ಥಳದಲ್ಲಿ ಆರು ವರ್ಷದ ಹೆಣ್ಣು ಮಗುವೊಂದು ಪೋಷಕರಿಲ್ಲದೇ ಒಬ್ಬಂಟಿಯಾಗಿದ್ದು ಒದ್ದಾಡುತ್ತಿತ್ತು. ನಿನ್ನೆ (ಏ.೨೨ರಂದು) ಈ ಘಟನೆ ನಡೆದಿದ್ದು,ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾಗಿದ್ದರು.
ಇದೀಗ ಕೊನೆಗೂ ಧರ್ಮಸ್ಥಳ ಪೊಲೀಸರು ಬಾಲಕಿಯ ಹೆತ್ತವರನ್ನು ಪತ್ತೆ ಹಚ್ಚಿ ಮನೆಯವರೊಂದಿಗೆ ಆಕೆಯನ್ನು ಕಳುಹಿಸಿದ್ದಾರೆ. ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಾಪತ್ತೆಯಾದ ಹೆತ್ತವರನ್ನು ಹುಡುಕಿ ಮಗುವನ್ನು ಹೆತ್ತವರ ಮಡಿಲಿಗೆ ಸೇರಿಸಿದ್ದಾರೆ.
ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆಂದು ಏ.22 ರಂದು ಬೆಳಗ್ಗೆ ಬಂದಿದ್ದು, ಈ ವೇಳೆ ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾಗಿದ್ದರು.ಪೋಷಕರಿಲ್ಲದೇ ಒದ್ದಾಡುತ್ತಿದ್ದ ಮಗು ಆಳುತ್ತಿತ್ತು. ಇದನ್ನು ಗಮನಿಸಿದ ಭಕ್ತರು ಧರ್ಮಸ್ಥಳ ಮಾಹಿತಿ ಕಚೇರಿಗೆ ತಲುಪಿಸಿ ವಿಚಾರಿಸಿದಾಗ ಮನೆಯವರು ಕಾಣೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ ಅವರು ಮಗುವನ್ನು ರಕ್ಷಣೆ ಮಾಡಿದ್ದರು. ಇದೀಗ ಮಗುವನ್ನು ಹೆತ್ತವರಿಗೆ ಒಪ್ಪಿಸಲಾಗಿದೆ.