ನ್ಯೂಸ್ ನಾಟೌಟ್: ತುಳುನಾಡು ಎಂದರೆ ಹಲವು ವಿಶೇಷತೆಗಳ ತವರು. ಇಲ್ಲಿನ ಆಚರಣೆಗಳು ಇತರೆ ಸ್ಥಳಗಳಿಗಿಂತ ವಿಶೇಷ ಹಾಗೂ ವಿಭಿನ್ನ. ಇಂತಹ ನಾಡಿನಲ್ಲಿ ಅದೆಷ್ಟೋ ವೀರ ಪುರುಷರು ಹುಟ್ಟಿದ್ದಾರೆ. ತುಳುನಾಡಿನ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಅಂತಹ ವೀರರ ಪರಿಚಯವನ್ನು ಮಾಡಿಸುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ವಿ.ಸುನಿಲ್ ಕುಮಾರ್ ಅವರು ವಿಭಿನ್ನ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಇತಿಹಾಸದ ಸ್ಮರಣೆಯ ಜತೆಗೆ ವೀರ ಪುರುಷರ ಪ್ರೇರಣೆ ಎಂಬ ಕನಸಿನೊಂದಿಗೆ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.
ಏನೇನಿದೆ ವಿಶೇಷತೆ?
ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಸ್ಥಬ್ಧ ಚಿತ್ರಗಳ ನಿರ್ಮಾಣವನ್ನು ಮಾಡಲಾಗಿದೆ. ತುಳುನಾಡಿನ ವೀರ ಪುರುಷರಾದ ಕೋಟಿ- ಚೆನ್ನಯ್ಯ ಸ್ಮರಣೆಯೊಂದಿಗೆ ಮಾಡಲಾಗಿದೆ. ಇದೆಲ್ಲವೂ ಪ್ರವಾಸಿಗರ ಕಣ್ಣಿಗೆ ಹಬ್ಬವಾದರೆ ಥೀಂ ಪಾರ್ಕ್ ನಲ್ಲಿ ಅಪರೂಪದ ಆಯುರ್ವೇದ ಗಿಡಗಳು, ಮರಗಳ ಸಂರಕ್ಷಣೆ ಅಸಂಖ್ಯಾತ ಪಕ್ಷಿ ಸಂಕುಲಕ್ಕೆ ಆಶ್ರಯ ತಾಣವಾಗಿದೆ.
ವೃಕ್ಷೋದ್ಯಾನ ಆಕರ್ಷಣೆ:
ಪ್ರವಾಸಿಗರಿಗೆ ಥೀಮ್ ಪಾರ್ಕ್ ಆಕರ್ಷಣೆಯ ಜತೆಗೆ ವೃಕ್ಷೋದ್ಯಾನ ಕೂಡ ಒಂದು ಅನ್ನುವುದು ವಿಶೇಷ. ಹೆಬ್ರಿ ನೆಲ್ಲೂರು ಹರಿಯಪ್ಪನ ಕೆರೆ ಬಳಿ ಸಾಲು ಮರದ ತಿಮ್ಮಕ್ಕ ಟ್ರಿ ಪಾರ್ಕ್ ಅನ್ನು ಮಾಡಲಾಗಿದೆ. ವೃಕ್ಷೋದ್ಯಾನವನದ ನಿರ್ಮಾಣದ ಮೂಲಕ ಸ್ಥಳೀಯ ಜನರಿಗೆ ಸುಂದರ ಪರಿಸರದ ಕೊಡುಗೆ ವಿವಿಧ ಗಿಡಮರಗಳ ಸಂರಕ್ಷಣೆ, ಏರುತ್ತಿರುವ ತಾಪಮಾನ, ಕುಸಿಯುತ್ತಿರುವ ಅಂತರ್ಜಲ ಎರಡನ್ನೂ ಸರಿದೂಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.