ನ್ಯೂಸ್ ನಾಟೌಟ್: ನೀರು ಪ್ರತಿಯೊಬ್ಬ ಮನುಷ್ಯನ ಬದುಕಿನ ಜೀವಾಳ. ನೀರಿಲ್ಲದಿದ್ದರೆ ಜಗತ್ತಿನಲ್ಲಿ ಯಾವ ಚಟುವಟಿಕೆಯೂ ನಡೆಯಲು ಸಾಧ್ಯವಿಲ್ಲ. ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟಗಳಲ್ಲಿ ಪ್ರತಿ ಸಲವೂ ನೀರಿನ ಕೊರತೆಯ ಬಗ್ಗೆಯೇ ದೊಡ್ಡ ಚರ್ಚೆಯಾಗುತ್ತಿರುತ್ತದೆ. ಆದರೆ ಕಾರ್ಕಳದಲ್ಲಿ ಇಂತಹ ಚರ್ಚೆಗೆ ಆಸ್ಪದ ಬರುವ ಪ್ರಶ್ನೆಯೇ ಇಲ್ಲ.
ಹೌದು, ಅಷ್ಟರ ಮಟ್ಟಿಗೆ ಕೆಲಸ ಮಾಡಿ ತೋರಿಸಿದ್ದಾರೆ ಶಾಸಕ ವಿ. ಸುನೀಲ್ ಕುಮಾರ್ ಅನ್ನುವುದು ವಿಶೇಷ. ಇವರ ಭಗೀರಥ ಪ್ರಯತ್ನದಿಂದಾಗಿ ಕಾರ್ಕಳದಲ್ಲಿ ಪ್ರತಿಯೊಬ್ಬರ ಮನೆಮನೆಗೂ ನೀರಿನ ಸೌಲಭ್ಯ ತಲುಪಿದೆ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ಬಗೆ ಹರಿದಿರುವುದನ್ನು ಕಾಣಬಹುದಾಗಿದೆ.
ಬಿಜೆಪಿ ಆಡಳಿತ ಅವಧಿಯಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಬವಣೆ ತೀರಿಸುವುದಕ್ಕಾಗಿ ಅವಿರತವಾಗಿ ಶ್ರಮಿಸಲಾಗಿದೆ. ಏತ ನೀರಾವರಿ ಹಾಗೂ ಜಲಜೀವನ್ ಮಿಷನ್ ಯೋಜನೆಯ ಮೂಲಕ ಮನೆಮನೆಗೂ ಗಂಗೆ ಹರಿದಿದೆ. ಎಣ್ಣೆ ಹೊಳೆ ಏತ ನೀರಾವರಿ ಯೋಜನೆಯಿಂದ 1500 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ. ಸುತ್ತಮುತ್ತಲಿನ ಹಲವಾರು ಕೆರೆ ಬಾವಿಗಳಿಗೆ ಜಲ ಮರು ಪೂರಣವನ್ನು ಮಾಡಲಾಗಿದೆ. ಇದರಿಂದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಎಣ್ಣೆಹೊಳೆಯ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವನ್ನು ಒದಗಿಸಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕಾರ್ಕಳಕ್ಕೆ 129.74 ಕೋಟಿ ರೂ. ಒದಗಿಸಲಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದ 34 ಗ್ರಾಮ ಪಂಚಾಯತ್ ಗಳ 504 ಜನವಸತಿ ಪ್ರದೇಶಗಳಿಗೆ ನೀರಿನ ಸಂಪರ್ಕವನ್ನು ಒದಗಿಸಲಾಗಿದ್ದು ಇದರಲ್ಲಿ 48 ಹೆಬ್ರಿ ಹಾಗೂ 150 ಕಾರ್ಕಳ ಒಳಗೊಂಡಿದೆ. ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.