ಸುಳ್ಯ: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಮತ್ತು ಸ್ವಚ್ಛತಾ ಸೇವಾ ಕಾರ್ಯಕ್ರಮಗಳ ಅಂಗವಾಗಿ ಇಂದು ಗ್ರಾಮ ಪಂಚಾಯತ್ ಅರಂತೋಡು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಅರಂತೋಡು ವಾಹನ ಮಾಲಕ-ಚಾಲಕರ ಸಂಘದ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಯುವ ಬ್ರಿಗೇಡ್ ನ ಸದಸ್ಯರು ಸ್ವಯಂ ಸ್ಫೂರ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸೇವಾ ಮನೋಭಾವವನ್ನು ಮೆರೆದಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ, ಉಪಾಧ್ಯಕ್ಷೆ ಕುಮಾರಿ ಶ್ವೇತಾ, SLRM ಸಂಘದ ಅಧ್ಯಕ್ಷ ಶಿವಾನಂದ ಕುಕ್ಕುಂಬಳ, ವಾಹನ ಮಾಲಕ ಚಾಲಕರ ಸಂಘದ ಕಾರ್ಯದರ್ಶಿ ರೋಹಿತ್ ,ಗ್ರಾಮ ಪಂಚಾಯತ್ ಸದಸ್ಯರು , ವಾಹನ ಮಾಲಕ ಚಾಲಕ ಸಂಘದ ಸದಸ್ಯರು , ಗ್ರಾಪಂ ಸಿಬ್ಬಂದಿಗಳು , SLRM ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸೋಮಶೇಖರ ಪೈಕ ಮತ್ತು ತಂಡದವರು ತಮ್ಮ ಸ್ವಂತ ಕಳೆ ತೆಗೆಯುವ ಮಿಷನ್ನಲ್ಲಿ ಅರಂತೋಡು ಪೇಟೆಯ ಕಾಡನ್ನು ಕಡಿದು ಸೇವಾಮನೋಭಾವ ಮೆರೆದದ್ದು ವಿಶೇಷವಾಗಿತ್ತು.