ನ್ಯೂಸ್ ನಾಟೌಟ್: ಇಂದು ಪ್ರಕಟವಾದ ಪದವಿ ಪೂರ್ವ ಪರೀಕ್ಷಾ ಫಲಿತಾಂಶದ ಪ್ರಕಾರ ಕೆ.ವಿ.ಜಿಯ ನೆಹರು ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿ.ಯು.ಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದು, ಕಲಾ ವಿಭಾಗದಲ್ಲಿ ಮತ್ತು ವಾಣಿಜ್ಯ ವಿಭಾಗದಲ್ಲಿ 100 ಶೇ. ಫಲಿತಾಂಶ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ 97.72 ಶೇ. ಫಲಿತಾಂಶ ದೊರಕಿದೆ.
ಪಿ.ಯು.ಸಿ ಯ ಕಲಾವಿಭಾಗದಲ್ಲಿ ಮನು.ಎಸ್ ನಾಯಕ್ 541 ಅಂಕಗಳನ್ನು ಪಡೆದು 90.16% ಅಂಕಗಳೊಂದಿಗೆ ಡಿಸ್ಟಿಂಗ್ಷನ್ ನಲ್ಲಿ ತೇರ್ಗಡೆ ಹೊಂದಿದ್ದು, ಪ್ರಮಿತ(470 ಅಂಕ) ಮತ್ತು ಮೊಹಮ್ಮದ್ ಅನಾಸ್ 468 ಅಂಕಗಳನ್ನು ಪಡೆದು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ರಾಶಿ ಡಿ.ಡಿ(553 ಅಂಕ), ಅಂಕಿತ್ ಕೃಷ್ಣ ಹೆಚ್ (549 ಅಂಕ), ಶಶಾಂಕ್ ಕೆ.ಆರ್ (549 ಅಂಕ), ದೀಕ್ಷಿತಾ ಜಿ,ಆಚಾರ್(538 ಅಂಕ), ಮೋಕ್ಷಿತ್ ಎಂ.ವಿ(528 ಅಂಕ), ಪ್ರೀತೇಶ್ ಎಂ(524 ಅಂಕ) ಮತ್ತು ನಿಶ್ಮಿತಾ ಕೆ.ಎಸ್(522 ಅಂಕ) ಡಿಸ್ಟಿಂಗ್ಷನ್ ನಲ್ಲಿ ಪಾಸಾಗಿದ್ದಾರೆ. ಜೊತೆಗೆ ವಾಣಿಜ್ಯ ವಿಭಾಗದ ಉಳಿದ 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗು 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂದಿದ್ದಾರೆ.
ಕೆ.ವಿ.ಜಿಯ ನೆಹರು ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಸೌದ.ಕೆ(570 ಅಂಕ), ನಿಶ್ವಿತ.ಕೆ(565 ಅಂಕ), ನೌಝತ್ (561 ಅಂಕ), ಯುಸುಫ್ ಸುಹಾಲಿ ಬಿ.ಹೆಚ್ (557 ಅಂಕ), ಗೌತಮ್ ಪಿ (553 ಅಂಕ), ಕೃತಿ.ಜಿ. ರಾವ್ (550 ಅಂಕ), ದ್ಯಾನ್ ವಿಜಯ್ (543 ಅಂಕ) ಶ್ರೇಷ್ಠ.ಡಿ(538 ಅಂಕ), ಫಾತಿಮಾತ್ ಜಾಸಿನ (226 ಅಂಕ), ವಂದನಾ ಕೆ.ವಿ (525 ಅಂಕ), ಪಲ್ಲವಿ.ಕೆ(516 ಅಂಕ), ಇಬ್ರಾಹಿಂ ಷಾ (513 ಅಂಕ), ಮೊಹಮ್ಮದ್ ರಿಝಾನ್ (511 ಅಂಕ) ಪಡೆದು ಒಟ್ಟು 13 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಗ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಉಳಿದ 23 ವಿದ್ಯಾರ್ಥಿಗಳು ಪ್ರಥಮ ಮತ್ತು 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಕೆ.ವಿ.ಜಿಯ ನೆಹರು ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನ ಒಟ್ಟು 98.90ಶೇ. ಫಲಿತಾಂಶದೊAದಿಗೆ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.