ನ್ಯೂಸ್ ನಾಟೌಟ್:ಕಾಲ ಬದಲಾಗಿದೆ.ಪ್ರಾಮಾಣಿಕರನ್ನು ಹುಡುಕುವುದೇ ಕಷ್ಟವಾಗಿದೆ.ಕಳೆದು ಹೋದ ವಸ್ತುಗಳು ಇನ್ನೊಬ್ಬರ ಕೈ ಪಾಲಾದಾಗ ಆ ವಸ್ತುಗಳು ನಮ್ಮ ಕೈ ಸೇರುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ.ಅಥವಾ ಆ ವಸ್ತುಗಳನ್ನು ಖರೀದಿಸುವ ಹಿಂದೆ ಎಷ್ಟು ಶ್ರಮವಿದೆ ಅನ್ನುವಂಥದ್ದರ ಬಗ್ಗೆ ಕೆಲವರು ಮಾತ್ರ ಯೋಚಿಸುತ್ತಾರೆ.ಈಗಿನ ಕಾಲದಲ್ಲೂ ಅಲ್ಲೋ ಇಲ್ಲೋ ಬೆರಳೆಣಿಕೆಯ ಸಂಖ್ಯೆಯಲ್ಲಿ ಕೆಲವರು ಮಾನವೀಯತೆ,ಪ್ರಾಮಾಣಿಕತೆಗೆ ಬೆಲೆ ಕೊಡುವವರು ಇದ್ದಾರೆ.ಅಂಥವರ ಸಾಲಿಗೆ ಇಲ್ಲೊಬ್ಬರು ಕಡಬದ ವ್ಯಕ್ತಿ ಸೇರಿಕೊಳ್ಳುತ್ತಾರೆ.ಮೈಸೂರಿನಲ್ಲಿ ಬಸ್ ನಲ್ಲಿ ಸಿಕ್ಕಿದ್ದ ಐಫೋನ್ ನನ್ನು ಮಹಿಳೆಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮತ್ತು ಪ್ರಾಮಾಣಿಕತೆ ಮೆರೆದಿದ್ದಾರೆ.
ಕಳೆದುಕೊಂಡ ಮೊಬೈಲ್ ಪಡೆಯಲು ಯುವತಿಯೊಬ್ಬಳು ತಮ್ಮ ಕುಟುಂಬ ಬಳಗದ ಜೊತೆ ಕಡಬಕ್ಕೆ ಬಂದಿದ್ದಾರೆ. ಈ ಘಟನೆ ಎ.19 ರಂದು ವರದಿಯಾಗಿದೆ.ಕಡಬ ನಿವಾಸಿ ನಾಗರಾಜ್ ಎಂಬವರು ಬಟ್ಟೆ ಖರೀದಿಸಲೆಂದು ಊಟಿಗೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಮೈಸೂರು ಬಳಿ ತಲುಪುತ್ತಿದ್ದಂತೆ ಬಸ್ ನಲ್ಲಿ ಐಫೋನ್ ಸಿಕ್ಕಿತ್ತು. ಮೊಬೈಲ್ ಆನ್ ಮಾಡಿದ ಕೆಲ ಸಮಯದ ಬಳಿಕ ಕರೆಯೂ ಬಂದಿತ್ತು.ಈ ವೇಳೆ ಖಚಿತ ಮಾಹಿತಿ ಕೊಟ್ಟು ಸುಬ್ರಹ್ಮಣ್ಯ ಸಮೀಪದ ಕಡಬದಲ್ಲಿ ತಾನು ಇದ್ದು ಮೊಬೈಲ್ ತನ್ನ ಬಳಿಯೇ ಇದೆ ಎಂದು ತಿಳಿಸಿದ್ದರು.
ಮೊಬೈಲ್ ಕಳೆದುಕೊಂಡಿದ್ದ ಮೈಸೂರು ಮೂಲದ ಯುವತಿ ಶೀತಲ್ ಪ್ರಸಾದ್ ಈ ವಿಷಯವನ್ನು ತಿಳಿದು ಕುಟುಂಬದೊಂದಿಗೆ ಕಡಬಕ್ಕೆ ಆಗಮಿಸಿದ್ದಾಳೆ. ಸುಮಾರು ಎಂಬತ್ತು ಸಾವಿರ ರೂ. ಮೌಲ್ಯದ ಐ ಫೋನನ್ನು ಪಾಪಾಸ್ ಪಡೆದು ಕೊಂಡಿದ್ದಾಳೆ. ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಇದನ್ನು ಹಸ್ತಾಂತರ ಮಾಡಲಾಯಿತು.ಮೊಬೈಲನ್ನು ವಾಪಾಸು ನೀಡಿ ಪ್ರಾಮಾಣಿಕತೆ ಮರೆದ ನಾಗರಾಜ್ ಅವರನ್ನುಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರವಿಕುಮಾರ್, ಲೋಕೆಶ್, ತ್ಯಾಗರಾಜ್ ಕಡಬ ಜತೆಗಿದ್ದರು.